Sunday, April 26, 2026
Flats for sale
Homeಜಿಲ್ಲೆಮಂಗಳೂರು ; ಜೆಪ್ಪಿನಮೊಗರು ಬಳಿ ಬೈಕ್ ನಲ್ಲಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ MDMA ಮಾದಕ ವಸ್ತು...

ಮಂಗಳೂರು ; ಜೆಪ್ಪಿನಮೊಗರು ಬಳಿ ಬೈಕ್ ನಲ್ಲಿ ಸಾಗಿಸುತ್ತಿದ್ದ ಬೃಹತ್ ಪ್ರಮಾಣದ MDMA ಮಾದಕ ವಸ್ತು ವಶಕ್ಕೆ – ಇಬ್ಬರು ಡ್ರಗ್ ಪೆಡ್ಲರ್‌ಗಳು ಬಂಧನ.

ಮಂಗಳೂರು : ಇಂದು ಮಂಗಳೂರು ನಗರದ ಜೆಪ್ಪಿನ ಮೊಗರು ಪ್ರದೇಶದಲ್ಲಿ ದ್ವಿಚಕ್ರ ವಾಹನದಲ್ಲಿ ದೊಡ್ಡ ಪ್ರಮಾಣದ MDMA ಮಾದಕ ವಸ್ತುವನ್ನು ಮಾರಾಟ ಮಾಡಲು ಬರುತ್ತಿರುವುದಾಗಿ ಕಂಕನಾಡಿ ನಗರ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದ್ದು ‌ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಕೆಎ 70 ಕೆ 3333 ನಂಬರ್‌ನ ಬಜಾಜ್ ಫ್ರೀಡಂ ಬೈಕ್‌ನಲ್ಲಿ MDMA ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಪಿಲಾರು ಹೊಸಗದ್ದೆ ಮನೆ ನಿವಾಸಿ
ಪರ್ವೇಜ್ @ ದಾವೂದ್ ಪರ್ವೇಜ್ (40) ಹಾಗೂ ಪೆರ್ಮಾನ್ನೂರು ನಿವಾಸಿ ನಜರತ್ ಅಲಿ (37 ಎಂದು ತಿಳಿದುಬಂದಿದೆ.

ಬಂಧಿತರಿಂದ ರೂ. 46,50,000 ಮೌಲ್ಯದ 465.8 ಗ್ರಾಂ ತೂಕದ MDMA ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತನಿಖೆಯಲ್ಲಿ ತಿಳಿದುಬಂದಂತೆ, ಪ್ರಮುಖ ಆರೋಪಿ ಪರ್ವೇಜ್ ಮಂಗಳೂರಿನ ಯುವ ಸಮುದಾಯ ಹಾಗೂ ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಜಿಲ್ಲೆಯ ಹೊರಗಿನಿಂದ ಬೃಹತ್ ಪ್ರಮಾಣದಲ್ಲಿ MDMA ತಂದು ನಗರದಲ್ಲಿ ಮಾರಾಟ ಮತ್ತು ಸರಬರಾಜು ಮಾಡಲು ಪ್ರಯತ್ನಿಸುತ್ತಿದ್ದನು. ಪರ್ವೇಜ್ ವಿರುದ್ಧ ಈಗಾಗಲೇ ಪಾಂಡೇಶ್ವರ, ವಾಮಂಜೂರು, ಬಂದರು ಪೊಲೀಸ್ ಠಾಣೆಗಳು, ಬೆಂಗಳೂರಿನ ಅಮೃತಹಳ್ಳಿ ಹಾಗೂ ಉಡುಪಿ ಸೆನ್ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಸಂಬಂಧ ಪ್ರಕರಣಗಳು ದಾಖಲಾಗಿದ್ದು, ಈತನು ರೂಢಿಗತ ಡ್ರಗ್ ಪೆಡ್ಲರ್ ಆಗಿರುವುದು ತಿಳಿದುಬಂದಿದೆ. ನಜರತ್ ಅಲಿ ಈತನೊಂದಿಗೆ ಡ್ರಗ್ ಪೆಡ್ಲಿಂಗ್ ಚಟುವಟಿಕೆಯಲ್ಲಿ ಸಹಕರಿಸುತ್ತಿದ್ದನು. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular