Thursday, July 23, 2026
Homeಸಿನಿಮಾಮುಂಬೈ : 'ನಾನು ಬದುಕಿದ್ದೇನೆ' ಎಂದು ಹೇಳಿ 'ಎಲ್ಲರಿಗೂ ಶಾಕ್' ನೀಡಿ ಕ್ಷಮೆಯಾಚಿಸಿದ ಪೂನಂ ಪಾಂಡೆ.

ಮುಂಬೈ : ‘ನಾನು ಬದುಕಿದ್ದೇನೆ’ ಎಂದು ಹೇಳಿ ‘ಎಲ್ಲರಿಗೂ ಶಾಕ್’ ನೀಡಿ ಕ್ಷಮೆಯಾಚಿಸಿದ ಪೂನಂ ಪಾಂಡೆ.

ಮುಂಬೈ : ಮಾಡೆಲ್, ನಟ ಮತ್ತು ರಿಯಾಲಿಟಿ ಟಿವಿ ತಾರೆ ಪೂನಂ ಪಾಂಡೆ ಜೀವಂತವಾಗಿದ್ದಾರೆ. ಶನಿವಾರ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ರಿಲೀಸ್ ಮಾಡಿದ ಪಾಂಡೆ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ‘ಶಾಕ್’ ಮಾಡಿದ್ದಕ್ಕಾಗಿ ಕ್ಷಮೆಯಾಚಿಸುವ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಶುಕ್ರವಾರ, ಪೂನಮ್ ಅವರ ಮ್ಯಾನೇಜರ್ Instagram ಪೋಸ್ಟ್‌ನಲ್ಲಿ ಅವರು ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ಸುದ್ದಿ ಮಾಡಿದೆನೆಂದು ಪಾಂಡೆ ಹೇಳಿದ್ದಾರೆ.

ತಮ್ಮ ಸಾವಿನ ಬಗ್ಗೆ ತಾವೇ ಸುಳ್ಳು ಸುದ್ದಿ ಹಬ್ಬಿಸಿಕೊಳ್ಳಲು ಒಂದು ಕಾರಣವೂ ಇದೆಯಂತೆ. ಅದುವೇ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು! ‘ನಾನು ಬದುಕಿದ್ದೇನೆ. ಗರ್ಭಕಂಠ ಕ್ಯಾನ್ಸರ್​ನಿಂದ ನಾನು ಸತ್ತಿಲ್ಲ. ಆದರೆ, ಈ ರೋಗವನ್ನು ಹೇಗೆ ಎದುರಿಸಬೇಕು ಎನ್ನುವ ಜ್ಞಾನ ಇಲ್ಲದೆ ಸಾವಿರಾರು ಮಹಿಳೆಯರು ಸಾಯುತ್ತಿದ್ದಾರೆ. ಇತರ ಕೆಲವು ಕ್ಯಾನ್ಸರ್‌ಗಳಿಗಿಂತ ಇದು ಭಿನ್ನವಾಗಿದೆ. ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಯಬಹುದು. ಲಸಿಕೆ ಮತ್ತು ಆರಂಭಿಕ ಪತ್ತೆ ಪರೀಕ್ಷೆಗಳಿಂದ ಇದು ಸಾಧ್ಯ. ಈ ಕಾಯಿಲೆಯಿಂದ ತಮ್ಮ ಪ್ರಾಣ ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ’ ಎಂದು ಅವರು ಹೇಳಿದ್ದಾರೆ. ಎನ್ನುವ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

ಪೂನಂ ಪಾಂಡೆ ಉದ್ದೇಶ ಉತ್ತಮವಾಗಿದೆ. ಆದರೆ, ಅವರು ಅದಕ್ಕೆ ತುಳಿದ ಮಾರ್ಗ ಸರಿ ಇಲ್ಲ ಎಂದು ಅನೇಕರು ಹೇಳಿದ್ದಾರೆ. ಅವರ ಸಾವಿನ ವಿಚಾರ ಸಾಕಷ್ಟು ಸುದ್ದಿ ಆಗಿತ್ತು. ಅನೇಕರು ದುಃಖ ಹೊರಹಾಕಿದ್ದರು. ಸಾವಿನ ವಿಚಾರದಲ್ಲಿ ಈ ರೀತಿ ಮಾಡಬಾರದು ಎಂದು ಅನೇಕರು ನಟಿಗೆ ಬುದ್ಧಿವಾದ ಹೇಳಿದ್ದಾರೆ. ಅವರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ಬಿಟ್ಟಿ ಪ್ರಚಾರ ಪಡೆಯಲು ಅವರು ಈ ರೀತಿ ಮಾಡಿದ್ದಾರೆ’ ಎಂದು ಅನೇಕರು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular