Friday, July 31, 2026
Homeಜಿಲ್ಲೆಮಂಗಳೂರು : ಮಹಾರಾಜ ಟ್ರೋಫಿಗೆ ಸಜ್ಜಾದ ಕೋಸ್ಟಲ್ ಕಿಂಗ್ಸ್ : ಜೆರ್ಸಿ, ಆಂಥಮ್ ಅನಾವರಣ.

ಮಂಗಳೂರು : ಮಹಾರಾಜ ಟ್ರೋಫಿಗೆ ಸಜ್ಜಾದ ಕೋಸ್ಟಲ್ ಕಿಂಗ್ಸ್ : ಜೆರ್ಸಿ, ಆಂಥಮ್ ಅನಾವರಣ.

ಮಂಗಳೂರು : ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಷನ್ (KSCA) ಹಾಗೂ ಕೋಸ್ಟಲ್ ಕಿಂಗ್ಸ್ ಮಂಗಳೂರು ಸಂಯುಕ್ತವಾಗಿ ಆಯೋಜಿಸಿರುವ ಮಹಾರಾಜ ಟ್ರೋಫಿ KSCA T20 ಟೂರ್ನಿಯ ಅಂಗವಾಗಿ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ಅಧಿಕೃತ ಅನಾವರಣ ಕಾರ್ಯಕ್ರಮ ಇಂದು ಮಂಗಳೂರಿನ ತಾಜ್ ವಿವಾಂತ ಹೋಟೆಲ್‌ನ ಸೆನೆಟ್ ಹಾಲ್-1ರಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ KSCA ಗೌರವ ಖಜಾಂಚಿ ಬಿ.ಎನ್. ಮಧುಕರ್, KSCA ವ್ಯವಸ್ಥಾಪನಾ ಸಮಿತಿ ಸದಸ್ಯ ಅವಿನಾಶ್ ವೈದ್ಯ, KSCA ಮಂಗಳೂರು ವಲಯದ ಅಧ್ಯಕ್ಷ ಡಾ. ಶ್ರೀಕಾಂತ್ ರೈ, ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ಮಾಲೀಕ ವಿನೋದ್ ನಾಯ್ಡು ಹಾಗೂ ತಂಡದ 12th ಮ್ಯಾನ್ ವಾಯ್ಸ್ ರೂಪೇಶ್ ಶೆಟ್ಟಿ ಭಾಗವಹಿಸಿ ಮಾತನಾಡಿದರು.

ಈ ವೇಳೆ ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ನಾಯಕನಾಗಿ ಕರುಣ್ ನಾಯರ್ ಹಾಗೂ ಶ್ರೇಯಸ್ ಗೋಪಾಲ್ ರವರನ್ನು ಉಪ ನಾಯಕರನ್ನಾಗಿ ಅಧಿಕೃತವಾಗಿ ಪರಿಚಯಿಸಲಾಯಿತು. ತಂಡದ ಕ್ಯಾಚ್‌ಮೆಂಟ್ ಆಟಗಾರರಾಗಿ ಪ್ರದೀಪ್ ಕುಮಾರ್ ಅವರ ಹೆಸರನ್ನು ಘೋಷಿಸಲಾಯಿತು.ಕಾರ್ಯಕ್ರಮದಲ್ಲಿ ತಂಡದ ಅಧಿಕೃತ ಆಂಥಮ್ ಬಿಡುಗಡೆ ಹಾಗೂ ಹೊಸ ಜೆರ್ಸಿಯ ಅನಾವರಣವೂ ನಡೆಯಿತು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ ತಂಡದ ಸಿದ್ಧತೆ ಹಾಗೂ ಟೂರ್ನಿಯ ನಿರೀಕ್ಷೆಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು. ಮಹಾರಾಜ ಟ್ರೋಫಿ KSCA T20 ಟೂರ್ನಿಗೆ ಕರಾವಳಿ ಭಾಗದ ಕ್ರಿಕೆಟ್ ಅಭಿಮಾನಿಗಳಲ್ಲಿ ಈಗಾಗಲೇ ಸಾಕಷ್ಟು ಉತ್ಸಾಹ ಕಂಡುಬಂದಿದ್ದು, ಕೋಸ್ಟಲ್ ಕಿಂಗ್ಸ್ ಮಂಗಳೂರು ತಂಡದ ಅನಾವರಣ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿ ಮೂಡಿಬಂದಿತು.

RELATED ARTICLES

LEAVE A REPLY

Please enter your comment!
Please enter your name here

Most Popular