Monday, July 20, 2026
Homeಸಿನಿಮಾಬೆಂಗಳೂರು ; 'ಶಬ್ದ' ಚಿತ್ರ ಐದು ಭಾಷೆಯಲ್ಲಿ ಫೇ.28ಕ್ಕೆ ಬಿಡುಗಡೆ.!

ಬೆಂಗಳೂರು ; ‘ಶಬ್ದ’ ಚಿತ್ರ ಐದು ಭಾಷೆಯಲ್ಲಿ ಫೇ.28ಕ್ಕೆ ಬಿಡುಗಡೆ.!

ಬೆಂಗಳೂರು ; ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಗಮನ ಸೆಳೆದಿರುವ ನಟ ಆದಿ ಪಿನಿಶೆಟ್ಟಿ ಅಭಿನಯದ ಚಿತ್ರ ‘ಶಬ್ದ’ ಫೆಬ್ರವರಿ 28 ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಹಾರರ್-ಥ್ರಿಲ್ಲರ್ ಚಿತ್ರವನ್ನು ಅರಿವಳಗನ್ ವೆಂಕಟಾಚಲಂ ನಿರ್ದೇಶಿಸಿದ್ದು, 7G ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ.

ಚಿತ್ರದಲ್ಲಿ ಲಕ್ಷ್ಮಿ ಮೆನನ್, ಲೈಲಾ ಮತ್ತು ಸಿಮ್ರನ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಸ್ ಎಸ್ ತಮನ್ ಸಂಗೀತ ನಿರ್ದೇಶನ, ಅರುಣ್ ಪದ್ಮನಾಭನ್ ಛಾಯಾಗ್ರಹಣ ಮತ್ತು ವಿಜೆ ಸಾಬು ಜೋಸೆಫ್ ಅವರ ಸಂಕಲನದೊಂದಿಗೆ ಈ ಚಿತ್ರ ಇನ್ನಷ್ಟು ವಿಶೇಷವಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಚಿತ್ರದ ಟೀಸರ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಚಿತ್ರವನ್ನು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ಆಡಿಯೋ ಮತ್ತು ಟ್ರೈಲರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular