Thursday, July 23, 2026
Homeದೇಶಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ 11 ದಿನಗಳ ಕಾಲ ಉಪವಾಸ ವ್ರತದ ಬಗ್ಗೆ...

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ 11 ದಿನಗಳ ಕಾಲ ಉಪವಾಸ ವ್ರತದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ವೀರಪ್ಪ ಮೊಯ್ಲಿ,ಟಾಂಗ್ ಕೊಟ್ಟ ಲೇಹರ್ ಸಿಂಗ್.

ಬೆಂಗಳೂರು : ದೇಶದ ಜನರು ಹಲವಾರು ವರ್ಷಗಳಿಂದ ಕಾಯುತಿದ್ದ ರಾಮಮಂದಿರ ಉದ್ಘಾಟನೆಯ 11 ದಿನಗಳ ವರೆಗೆ ಪ್ರಧಾನಿ ಮೋದಿಯವರು ಉಪವಾಸ ವೃತ ಕೈಗೊಂಡಿದ್ದು,ಹಾಗೂ ಆ ಸಂದರ್ಭದಲ್ಲಿ ಹಲವಾರು ದೇವಸ್ಥಾನಗಳಿಗೆ ಭೇಟಿನೀಡಿದ್ದರು.ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಉಪವಾಸ ವ್ರತ ಬಗ್ಗೆ ಟೀಕೆ ಮಾಡಿದ ಕಾಂಗ್ರೆಸ್‌ ಹಿರಿಯ ನಾಯಕ ವೀರಪ್ಪ ಮೊಯ್ಲಿಗೆ ಬಿಜೆಪಿ ಸಂಸದ ಲಹರ್‌ ಸಿಂಗ್‌ ಸಿರೋಯ ತಿರುಗೇಟು ನೀಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಲಹರ್‌ ಸಿಂಗ್, ಮಹಾನ್‌ ಸಾಹಿತಿಯಂತೆ ವೇಷ ಧರಿಸಿರುವ ವೀರಪ್ಪ ಮೊಯ್ಲಿಯವರು ಎಲ್ಲರೂ ತಮ್ಮಂತೆ ಸುಳ್ಳುಗಾರರು ಅಂದುಕೊಂಡಿದ್ದಾರೆ. ಶ್ರೀರಾಮನಲ್ಲಿ ನಂಬಿಕೆ ಇದ್ದರೆ ಮಾತ್ರ ನೀವು ಉಪವಾಸ ಮಾಡಿ ಬದುಕಬಹುದೇ ಹೊರತು ಗಾಂಧಿ ಕುಟುಂಬವನ್ನು ಮೆಚ್ಚಿಸಲು ಯತ್ನಿಸಿದರೆ ಅಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

11 ದಿನಗಳ‌ ಉಪವಾಸ ಮಾಡಿದ್ರೆ ಮನುಷ್ಯ ಬದುಕಲು ಸಾಧ್ಯವಿಲ್ಲ ಎಂದು ಹೇಳಿದ ಅವರು ಮೋದಿಯವರ ಉಪವಾಸದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ಸಾಮಾಜಿಕ ಜಾಲತಾಣದಲ್ಲೂ ಅಪಹಾಸ್ಯಕ್ಕೆ ಒಳಗಾದರು. ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಮೋದಿ ಉಪವಾಸ ಮಾಡಿಲ್ಲ ಏಳನೀರು ಮಾತ್ರ ಕುಡಿದು ಉಪವಾಸ ಮಾಡಿದ್ರೆ ಒಂದೆರೆಡು ದಿನದಲ್ಲಿ ಮನುಷ್ಯ ಬೀಳುತ್ತಾನೆ. ಈ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಉಪವಾಸ ವ್ರತದ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

ಉಪವಾಸ ಅಂತ ಹೇಳಿ ಮೋದಿ ಬಹಳ ಜೋರಾಗಿ ಒಡಾಡಿದ್ದಾರೆ ,ವೈದ್ಯರ ಅಭಿಪ್ರಾಯದ ಪ್ರಕಾರ ಅದು ಅಸಾಧ್ಯ,ಇವರ ನಾಟಕ ಇನ್ನೂ ಮುಂದೆ ನಡೆಯಲ್ಲ,ಉಪವಾಸ ಇದ್ದ ಹಾಗೆ ನರೇಂದ್ರ ಮೋದಿ ಕಾಣಲಿಲ್ಲ. ದೇವರಿಗೆ ಇಚ್ಛೆ ಪ್ರಕಾರ ಏನು ಬೇಕಾದರೂ ಮಾಡಲಿ ಎಂದು ಹೇಳಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular