Tuesday, April 21, 2026
Flats for sale
Homeಜಿಲ್ಲೆಪುತ್ತೂರು ; ಪುತ್ತೂರು ಮಹಾಲಿಂಗೇಶ್ವರ ಜಾತ್ರೆಯಲ್ಲಿ ಸುಡುಮದ್ದು ಪ್ರದರ್ಶನ ವೇಳೆ ಅವಘಡ,ಆಯೋಜಕರ ವಿರುದ್ಧ ದೂರು ದಾಖಲು.

ಪುತ್ತೂರು ; ಪುತ್ತೂರು ಮಹಾಲಿಂಗೇಶ್ವರ ಜಾತ್ರೆಯಲ್ಲಿ ಸುಡುಮದ್ದು ಪ್ರದರ್ಶನ ವೇಳೆ ಅವಘಡ,ಆಯೋಜಕರ ವಿರುದ್ಧ ದೂರು ದಾಖಲು.

ಪುತ್ತೂರು : ಹತ್ತೂರ ಒಡೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಜಾತ್ರೆಯ ಸಂದರ್ಭದಲ್ಲಿ ನಡೆದ ಸುಡುಮದ್ದು (ಫೈರ್‌ವರ್ಕ್ಸ್) ಪ್ರದರ್ಶನದ ವೇಳೆ ಅವಘಡ ಸಂಭವಿಸಿದೆ.ಸುಡುಮದ್ದಿನ ಬೆಂಕಿ ಪ್ರೇಕ್ಷಕರ ಮೇಲೆ ಬಿದ್ದು ಹಲವರಿಗೆ ಗಾಯಗಳಾಗಿವೆ.

ಗಾಯಾಳುಗಳಲ್ಲಿ ಉಡುಪಿ ಕುಂದಾಪುರ ಮೂಲದ ಸುಮಂತ್ ಶೆಟ್ಟಿ ಸೇರಿದಂತೆ ಭರತ್, ಕೌಶಿಕ್, ಸೌಮ್ಯ, ದೀಪಕ್, ಯಶವಂತ್ ಮತ್ತು ಮೋಹನ್ ಸೇರಿದ್ದಾರೆ.
ಗಾಯಾಳುಗಳನ್ನು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ಹಿನ್ನೆಲೆಯಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ಆಯೋಜಕರ ವಿರುದ್ಧ ಯುವಕರು ದೂರು ದಾಖಲಿಸಿದ್ದಾರೆ. ಸುಡುಮದ್ದು ಪ್ರದರ್ಶನದ ವೇಳೆ ಅಗತ್ಯ ಮುಂಜಾಗ್ರತೆ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ಯ ಕಲಂ 288, 125(a), 3(5) ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಪೊಲೀಸರು ಘಟನೆ ಕುರಿತು ತನಿಖೆ ಮುಂದುವರೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular