Wednesday, June 24, 2026
Flats for sale
Homeರಾಜಕೀಯನವದೆಹಲಿ : 7 ಜನ ಆಪ್ ಸಂಸದರು ಬಿಜೆಪಿಯೊಂದಿಗೆ ವಿಲೀನ.

ನವದೆಹಲಿ : 7 ಜನ ಆಪ್ ಸಂಸದರು ಬಿಜೆಪಿಯೊಂದಿಗೆ ವಿಲೀನ.

ನವದೆಹಲಿ : ರಾಜ್ಯಸಭೆಯಲ್ಲಿ ಆಪ್ ಸದಸ್ಯರಾಗಿದ್ದ ರಾಘವ್ ಚಡ್ಢಾ ಮತ್ತಿತರ ಆರು ಜನ ಬಿಜೆಪಿಯೊಂದಿಗೆ ವಿಲೀನಗೊಳ್ಳುವುದಕ್ಕೆ ರಾಜ್ಯಸಭಾ ಸ್ಪೀಕರ್ ಸಿ.ಪಿ.ರಾಧಾಕೃಷ್ಣನ್ ಸೋಮವಾರ ಅಧಿಕೃತವಾಗಿ ಸಮ್ಮತಿ ನೀಡಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಈ ವಿಷಯವನ್ನು ಎಕ್ಸ್ ಜಾಲತಾಣದ ಮೂಲಕ ಖಚಿತಪಡಿಸಿದ್ದಾರೆ.

ಬಹಳ ದಿನಗಳಿಂದ ಈ ಸದಸ್ಯರನ್ನು ಗಮನಿಸುತ್ತಾ ಬಂದಿದ್ದು, ಇವರು ಎಂದೂ ನಿಂದಾತ್ಮಕ ಭಾಷೆಯನ್ನು ಬಳಸಿಲ್ಲ. ಅಸ ಂಸದೀಯ ನಡವಳಿಕೆ ತೋರಿಸಿಲ್ಲ ಎಂದಿದ್ದಾರೆ. ಏಳು ಜನ ಬಿಜೆಪಿಯಲ್ಲಿ ವಿಲೀನಗೊಂಡಿದ್ದರಿಂದ ಆಪ್‌ನ ಸಂಖ್ಯೆ ರಾಜ್ಯಸಭೆಯಲ್ಲಿ ೩ಕ್ಕೆ ಕುಸಿದಿದ್ದು, ಬಿಜೆಪಿ ಸದಸ್ಯರ ಸಂಖ್ಯೆ 113 ಕ್ಕೆ ಏರಿದಂತಾಗಿದೆ. ರಾಘವ್ ಚಡ್ಢಾ ಜೊತೆಗೆ ಅಶೋಕ್ ಮಿತ್ತಲ್, ಹರಭಜನ್ ಸಿಂಗ್, ಸಂದೀಪ್ ಪಾಠಕ್, ವಿಕ್ರಮ್‌ಜಿತ್ ಸಾಹ್ನಿ,ಸ್ವಾತಿ ಮಾಲಿವಾಲ್ ಮತ್ತು ರಾಜಿಂದರ್ ಗುಪ್ತಾ ಬಿಜೆಪಿಯಲ್ಲಿ ವಿಲೀನಗೊಂಡ ಆಪ್ ಸದಸ್ಯರು.

RELATED ARTICLES

LEAVE A REPLY

Please enter your comment!
Please enter your name here

Most Popular