Tuesday, November 24, 2026
Homeಗ್ಯಾಜೆಟ್ / ಟೆಕ್ನವದೆಹಲಿ : ವಾಟ್ಸ್‌ಆ್ಯಪ್ ಬಳಕೆದಾರರೇ ಎಚ್ಚರ,ವೆಬ್ ಬಳಕೆ ಮುಗಿದ ತಕ್ಷಣ ಲಾಗ್‌ಔಟ್ ಆಗಲು ಕೇಂದ್ರದ ಸೂಚನೆ..!

ನವದೆಹಲಿ : ವಾಟ್ಸ್‌ಆ್ಯಪ್ ಬಳಕೆದಾರರೇ ಎಚ್ಚರ,ವೆಬ್ ಬಳಕೆ ಮುಗಿದ ತಕ್ಷಣ ಲಾಗ್‌ಔಟ್ ಆಗಲು ಕೇಂದ್ರದ ಸೂಚನೆ..!

ನವದೆಹಲಿ : ಜನಪ್ರಿಯ ಮೆಸೆಂಜರ್ ವೇದಿಕೆ ವಾಟ್ಸ್‌ಆ್ಯಪ್ ಖಾತೆಗಳ ದುರ್ಬಳಕೆ ಸಾಧ್ಯತೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಬಳಕೆದಾರರಿಗೆ ಮಹತ್ವದ ಎಚ್ಚರಿಕೆ ನೀಡಿದೆ. ವಿಶೇಷವಾಗಿ ವಾಟ್ಸ್‌ಆ್ಯಪ್ ವೆಬ್ ಬಳಸುವವರು ಹೆಚ್ಚಿನ ಜಾಗರೂಕತೆ ವಹಿಸಬೇಕು ಹಾಗೂ ಬಳಕೆ ಮುಗಿದ ತಕ್ಷಣ ಖಾತೆಯಿಂದ ಲಾಗ್‌ಔಟ್ ಆಗಬೇಕು ಎಂದು ಸೂಚಿಸಿದೆ.

ವಾಟ್ಸ್‌ಆ್ಯಪ್ ಮೂಲಕ ಗೌಪ್ಯ ಹಾಗೂ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಳ್ಳದಂತೆಯೂ ಸಚಿವಾಲಯ ಸಾರ್ವಜನಿಕರಿಗೆ ಸಲಹೆ ನೀಡಿದೆ.

ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ರಾಷ್ಟ್ರೀಯ ಸೈಬರ್ ಅಪರಾಧ ಬೆದರಿಕೆ ವಿಶ್ಲೇಷಣಾ ಘಟಕ ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ.

ಲಾಗಿನ್ ಆಗಿರುವ ವಾಟ್ಸ್‌ಆ್ಯಪ್ ವೆಬ್ ಸೆಷನ್‌ಗಳನ್ನು ದುರ್ಬಳಕೆ ಮಾಡಿಕೊಂಡು ಬಳಕೆದಾರರ ಖಾತೆಗಳಿಗೆ ಅನಧಿಕೃತವಾಗಿ ಪ್ರವೇಶ ಪಡೆಯುವ ಅಪಾಯವಿದೆ ಎಂದು ಪ್ರಕಟಣೆಯಲ್ಲಿ ಎಚ್ಚರಿಸಲಾಗಿದೆ.

ಸಾರ್ವಜನಿಕ ಕಂಪ್ಯೂಟರ್‌ಗಳಲ್ಲಿ ಬಳಸದಂತೆ ಸೂಚನೆ

ಕಚೇರಿ ಕಂಪ್ಯೂಟರ್‌ಗಳು, ಸೈಬರ್ ಕೆಫೆಗಳು, ಹೋಟೆಲ್‌ಗಳ ಬಿಸಿನೆಸ್ ಸೆಂಟರ್‌ಗಳು ಹಾಗೂ ಇತರರು ಬಳಸಬಹುದಾದ ಸಾರ್ವಜನಿಕ ಸಾಧನಗಳಲ್ಲಿ ವಾಟ್ಸ್‌ಆ್ಯಪ್ ವೆಬ್ ಬಳಸದಂತೆ ಸೂಚಿಸಲಾಗಿದೆ.

ವಾಟ್ಸ್‌ಆ್ಯಪ್ ವೆಬ್ ಬಳಕೆ ಅನಿವಾರ್ಯವಾದಲ್ಲಿ ನಂಬಿಕಸ್ಥ ಕಂಪ್ಯೂಟರ್‌ಗಳಲ್ಲಿ ಮಾತ್ರ ‘ಇನ್‌ಕಾಗ್ನಿಟೋ’ ಅಥವಾ ‘ಪ್ರೈವೇಟ್ ಬ್ರೌಸಿಂಗ್’ ಮೋಡ್ ಬಳಸುವಂತೆ ಸಲಹೆ ನೀಡಲಾಗಿದೆ.

ಈ ಲಕ್ಷಣಗಳಿದ್ದರೆ ಎಚ್ಚರ!

ನಿಮ್ಮಿಂದ ಕಳುಹಿಸದ ಸಂದೇಶಗಳು ನಿಮ್ಮ ಖಾತೆಯಿಂದ ಇತರರಿಗೆ ಹೋಗುತ್ತಿದ್ದರೆ ಅಥವಾ ನಿಮ್ಮ ಸಂಪರ್ಕದಲ್ಲಿರುವವರು ಅನಿರೀಕ್ಷಿತ ಸಂದೇಶಗಳ ಕುರಿತು ಪ್ರತಿಕ್ರಿಯಿಸುತ್ತಿದ್ದರೆ ಎಚ್ಚರ ವಹಿಸಬೇಕು ಎಂದು ಸೂಚಿಸಲಾಗಿದೆ.

ವಾಟ್ಸ್‌ಆ್ಯಪ್ ಬಳಕೆದಾರರು ತಮ್ಮ ಖಾತೆಗಳ ಸುರಕ್ಷತೆಗಾಗಿ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular