Thursday, July 23, 2026
Homeದೇಶನವದೆಹಲಿ : ದೇಶದಲ್ಲಿ ಹೆಚ್ಚಿದ ತಾಪಮಾನ,ಮಳೆ ಬಾರದೆ ಹಲವೆಡೆ ಜನ ಸಂಕಷ್ಟಕ್ಕೆ.

ನವದೆಹಲಿ : ದೇಶದಲ್ಲಿ ಹೆಚ್ಚಿದ ತಾಪಮಾನ,ಮಳೆ ಬಾರದೆ ಹಲವೆಡೆ ಜನ ಸಂಕಷ್ಟಕ್ಕೆ.

ನವದೆಹಲಿ : ದಕ್ಷಿಣ ಭಾರತ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಚಳಿಗಾಲ ಕೊನೆಯ ಹಂತ ತಲುಪಿದೆ, ಬಿಸಿಲಿನ ತಾಪ ನಿಧಾನವಾಗಿ ಏರುತ್ತಿದೆ. ಆದರೆ ಕೆಲವೆಡೆ ಸಕಾಲಕ್ಕೆ ಮಳೆ ಬಾರದೆ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಇನ್ನೂ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಫೆಬ್ರವರಿ ಅಂತ್ಯದ ವೇಳೆಗೆ ತಾಪಮಾನ ಹೆಚ್ಚಾಗುವ ಮುನ್ಸೂಚನೆ ಇದೆ. ಫೆಬ್ರವರಿಯಲ್ಲಿಯೇ ಜನರ ಸುಡುತ್ತಿದೆ ಬಿಸಿಲ ತಾಪ ಇನ್ನೂ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ತಾಪಮಾನವು ಗರಿಷ್ಠ ಮಟ್ಟವನ್ನು ತಲುಪುತ್ತದೆ. ಹವಾಮಾನ ಇಲಾಖೆ ಪ್ರಕಾರ ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಹೆಚ್ಚಲಿದೆ.

ಬೆಂಗಳೂರು, ಮಂಡ್ಯ, ಮೈಸೂರು, ಕೋಲಾರ, ಹಾಸನ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ತಾಪಮಾನ ಏರುಪೇರಾಗಲಿದೆ.

ದೇಶದ ಹಲವು ರಾಜ್ಯಗಳಲ್ಲಿ ಚಳಿ ಕಡಿಮೆಯಾಗುತ್ತಿದ್ದರೆ, ಮತ್ತೊಂದೆಡೆ ಈಶಾನ್ಯದ ವಿವಿಧ ರಾಜ್ಯಗಳಲ್ಲಿ ಮಳೆ ಸುರಿಯುತ್ತಿದೆ. ಮುಂದಿನ ಐದು ದಿನಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ ಹವಾಮಾನದ ಪ್ರಕಾರ, ಫೆಬ್ರವರಿ 10 ರಿಂದ 14 ರವರೆಗೆ ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.

ಚಂಡಮಾರುತದ ಪ್ರಭಾವದಿಂದಾಗಿ, ಮುAದಿನ 5 ದಿನಗಳಲ್ಲಿ ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢದಲ್ಲಿ ಅಲ್ಲಲ್ಲಿ ಲಘು ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಫೆಬ್ರವರಿ 14 ರವರೆಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಕೇರಳದಂತಹ ದಕ್ಷಿಣ ರಾಜ್ಯಗಳು ಫೆಬ್ರವರಿ 10- 11 ರಂದು ಮಳೆಯಾಗಬಹುದು. ಫೆಬ್ರವರಿ 10 ಮತ್ತು 14 ರ ನಡುವೆ ಪೂರ್ವ ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢದಲ್ಲಿ, ಫೆಬ್ರವರಿ 10 ಮತ್ತು 11 ರಂದು ಮಧ್ಯ ಮಹಾರಾಷ್ಟç ಮತ್ತು ಫೆಬ್ರವರಿ 9 ರಿಂದ 11 ರ ನಡುವೆ ಮರಾಠವಾಡದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಸ್ಕೈ ಮೇಟ್ ಹವಾಮಾನದ ಪ್ರಕಾರ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳು ಮುಂದಿನ ೨೪ ಗಂಟೆಗಳಲ್ಲಿ ಲಘು ಮಳೆ ಮತ್ತು ಹಿಮಪಾತವನ್ನು ಅನುಭವಿಸುವ ಸಾಧ್ಯತೆಯಿದೆ. ಸದ್ಯ ಕರ್ನಾಟಕದಲ್ಲಿ ಮಳೆಯ ಮುನ್ಸೂಚನೆ ಇಲ್ಲ. ಬೆಂಗಳೂರು, ರಾಯಚೂರು, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ಹೆಚ್ಚಲಿದ್ದು, ಕರಾವಳಿ ಮತ್ತು ಮಲೆನಾಡಿನಲ್ಲಿ ಮೋಡ ಕವಿದಿದೆ.

ಉತ್ತರ ಒಳಭಾಗದಲ್ಲಿ ತಾಪಮಾನ ಹೆಚ್ಚುತ್ತಿದೆ. ಅಚ್ಚರಿ ಎಂದರೆ ಕೆಲವೆಡೆ ದಿಢೀರ್ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಇದಲ್ಲದೆ, ಫೆಬ್ರವರಿ 9 ರಂದು ಕರಾವಳಿ ಆಂಧ್ರಪ್ರದೇಶ, ಫೆಬ್ರವರಿ 9 ಮತ್ತು 10 ರಂದು ತಮಿಳುನಾಡು, ಫೆಬ್ರವರಿ 10 ಮತ್ತು 11 ರಂದು ತೆಲAಗಾಣ, ಫೆಬ್ರವರಿ 14 ರಂದು ಕೇರಳದಲ್ಲಿ ಲಘು ಮಳೆಯಾಗಲಿದೆ. ಆದರೆ ಆಗ್ನೇಯ ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಫೆಬ್ರವರಿ 13 ಮತ್ತು 14 ರ ನಡುವೆ ಮಳೆಯಾಗಬಹುದು ಫೆಬ್ರವರಿ 13 ಮತ್ತು 14 ರ ನಡುವೆ, ಗಂಗಾನದಿ ಪಶ್ಚಿಮ ಬಂಗಾಳದಲ್ಲಿ ಲಘು
ಮಳೆಯಾಗಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular