Thursday, July 23, 2026
Homeದೇಶದ್ವಾರಕ : ನವಿಲುಗರಿಗಳನ್ನು ಹಿಡಿದು ಆಳ ಸಮುದ್ರದಲ್ಲಿ ಶ್ರೀ ಕೃಷ್ಣನ ದ್ವಾರಕ ದರ್ಶನ ಮಾಡಿದ ಪ್ರಧಾನಿ...

ದ್ವಾರಕ : ನವಿಲುಗರಿಗಳನ್ನು ಹಿಡಿದು ಆಳ ಸಮುದ್ರದಲ್ಲಿ ಶ್ರೀ ಕೃಷ್ಣನ ದ್ವಾರಕ ದರ್ಶನ ಮಾಡಿದ ಪ್ರಧಾನಿ ಮೋದಿ.

ದ್ವಾರಕ : ಸ್ಕೂಬಾ ಡೈವಿಂಗ್ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಆಳ ಸಮುದ್ರಕ್ಕಿಳಿದು ಸಮುದ್ರದೊಳಗಿರುವ ದ್ವಾರಕಾಗೆ ತೆರಳಿ ಶ್ರೀಕೃಷ್ಣನ ದ್ವಾರಕ ದರ್ಶನ ಮಾಡಿದ್ದಾರೆ. ಆ ವೇಳೆ ಮೋದಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು ನವಿಲು ಗರಿಗಳನ್ನು ಸಮುದ್ರದೊಳಗೆ ಒಯ್ದು ಶ್ರೀ ಕೃಷ್ಣನಿಗೆ ಸಮರ್ಪಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೃಷ್ಣನ ದ್ವಾರಕೆ ಯನ್ನು ಕಣ್ತುಂಬಿಕೊಳ್ಳಲು ನವಿಲುಗರಿಗಳ ಹಿಡಿದು ಸಮುದ್ರದಾಳಕ್ಕೆ ಹಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಗುಜರಾತ್ ಪ್ರವಾಸದ ಎರಡನೇ ದಿನಕ್ಕೆ ಕಾಲಿಟ್ಟಿದ್ದಾರೆ. ಇಂದು ಮುಳುಗಡೆಯಾಗಿರುವ ದ್ವಾರಕಾನಗರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. 6 ವರ್ಷಗಳ ಹಿಂದೆ ಈ ಸೇತುವೆಯ ಶಂಕುಸ್ಥಾಪನೆ ಮಾಡಲು ನನಗೆ ಅವಕಾಶ ಸಿಕ್ಕಿತ್ತು ಎಂದು ಪ್ರಧಾನಿ ಹೇಳಿದರು. ಈ ಸೇತುವೆಯು ಓಖಾವನ್ನು ಬೆಟ್ ದ್ವಾರಕಾ ದ್ವೀಪಕ್ಕೆ ಸಂಪರ್ಕಿಸುತ್ತದೆ. ಈ ಸೇತುವೆಯು ದ್ವಾರಕಾಧೀಶನ ದರ್ಶನವನ್ನು ಸುಲಭಗೊಳಿಸುತ್ತದೆ ಮತ್ತು ಈ ಸ್ಥಳದ ದೈವಿಕತೆಯನ್ನು ಹೆಚ್ಚಿಸುತ್ತದೆ ಎಂದು ಆದ್ಯಾತ್ಮಿಕ ಲೋಕಕ್ಕೆ ಕರೆದೊಯ್ಯುತ್ತೆ ಎಂದು ಹೇಳಿದ್ದಾರೆ ಮತ್ತೊಂದು ವಿಶೇಷ ವೇನೆಂದರೆ ಆಳಸಮುದ್ರದಲ್ಲಿ ದ್ವಾರಕಾನಗರದ ಮುಂದೆ ಜಪದಲ್ಲಿ ತೊಡಗಿರುವುದು ಆಶ್ಚರ್ಯ ಕರವಾಗಿದೆ.

ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಸಲ್ಲಿಸುವುದು ಬಹಳ ದೈವಿಕ ಅನುಭವವಾಗಿದೆ. ಆಧ್ಯಾತ್ಮಿಕ ವೈಭವ ಮತ್ತು ಶಾಶ್ವತ ಭಕ್ತಿಯ ಪ್ರಾಚೀನ ಯುಗಕ್ಕೆ ನಾನು ಸಂಪರ್ಕ ಹೊಂದಿದ್ದೇನೆ. ಶ್ರೀ ಕೃಷ್ಣನು ನಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಬೇಡಿಕೊಂಡು ಅದೇ ಸಮಯದಲ್ಲಿ ಅವರು ಸಮುದ್ರದಲ್ಲಿ ನವಿಲು ಗರಿಗಳನ್ನು ಅರ್ಪಿಸಿದ್ದಾರೆ.

ಮೋದಿ ಅತ್ಯಂತ ಕಠಿಣವಾದ ಸಮುದ್ರದೊಳಗೆ ಇಳಿದು ದ್ವಾರಕ ದರ್ಶನ ಮಾಡಿ ಪೂಜೆ ಸಲ್ಲಿಸಿರುವುದು ಭಾರಿ ಶ್ಲಾಘನೆಗೆ ಒಳಗಾಗಿದೆ. ಈ ಅನುಭವವು ಭಾರತದ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಬೇರುಗಳಿಗೆ ಅಪರೂಪದ ಮತ್ತು ಆಳವಾದ ಸಂಪರ್ಕ ನೀಡಿದೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.ಇಂದು

ಮೋದಿ ಅತ್ಯಂತ ಕಠಿಣವಾದ ಸಮುದ್ರದೊಳಗೆ ಇಳಿದು ದ್ವಾರಕ ದರ್ಶನ ಮಾಡಿ ಪೂಜೆ ಸಲ್ಲಿಸಿರುವುದು ಭಾರಿ ಶ್ಲಾಘನೆಗೆ ಒಳಗಾಗಿದೆ. ಈ ಅನುಭವವು ಭಾರತದ ಆಧ್ಯಾತ್ಮಿಕ ಮತ್ತು ಐತಿಹಾಸಿಕ ಬೇರುಗಳಿಗೆ ಅಪರೂಪದ ಮತ್ತು ಆಳವಾದ ಸಂಪರ್ಕ ನೀಡಿದೆ ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular