Monday, August 17, 2026
Homeವಿದೇಶಟೆಹ್ರಾನ್ : ಅಮೆರಿಕ–ಇರಾನ್ ನಡುವೆ ಮತ್ತೆ ಯುದ್ಧ ಭೀತಿ : ಇರಾನ್ ಸೇನೆ ಎಚ್ಚರಿಕೆ.

ಟೆಹ್ರಾನ್ : ಅಮೆರಿಕ–ಇರಾನ್ ನಡುವೆ ಮತ್ತೆ ಯುದ್ಧ ಭೀತಿ : ಇರಾನ್ ಸೇನೆ ಎಚ್ಚರಿಕೆ.

ಟೆಹ್ರಾನ್ : ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತಾರಕ್ಕೇರಿರುವ ಹಿನ್ನೆಲೆಯಲ್ಲಿ, ಎರಡು ದೇಶಗಳ ನಡುವೆ ಮತ್ತೆ ಯುದ್ಧ ಆರಂಭವಾಗುವ ಸಾಧ್ಯತೆ ಇದೆ ಎಂದು ಇರಾನ್ ಸೇನೆಯ ಹಿರಿಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇರಾನ್ ಆರೋಪಿಸಿದಂತೆ, ಅಮೆರಿಕವು ಹಿಂದಿನ ಒಪ್ಪಂದಗಳು ಹಾಗೂ ರಾಜತಾಂತ್ರಿಕ ಮಾತುಕತೆಗಳಿಗೆ ಬದ್ಧವಾಗಿಲ್ಲ. ಈ ಕುರಿತು ಮಾತನಾಡಿದ ಇರಾನ್ ಸೇನಾ ಕಮಾಂಡರ್ ಮೊಹಮ್ಮದ್ ಜಫಾರ್ ಅಸಾದಿ , “ಅಮೆರಿಕ ಯಾವುದೇ ಒಪ್ಪಂದಗಳನ್ನು ಪಾಲಿಸುತ್ತಿಲ್ಲ; ಅವರ ಹೇಳಿಕೆಗಳು ಕೇವಲ ಮಾಧ್ಯಮ ಪ್ರಚಾರಕ್ಕಾಗಿ ಮಾತ್ರ” ಎಂದು ಆರೋಪಿಸಿದ್ದಾರೆ.

ಇದನ್ನೇ ಮುಂದುವರಿಸಿಕೊಂಡು, ಇರಾನ್ ಕಳುಹಿಸಿದ್ದ ಹೊಸ ಸಂಧಾನ ಪ್ರಸ್ತಾವನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ. ಇರಾನ್ ಮಂಡಿಸಿರುವ ಷರತ್ತುಗಳು ತೃಪ್ತಿಕರವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಮೂಲಕ ಕಳುಹಿಸಿದ್ದ ಪ್ರಸ್ತಾವನೆಯನ್ನು ಕೂಡ ಅಮೆರಿಕ ನಿರಾಕರಿಸಿದ ಬೆನ್ನಲ್ಲೇ, ಇರಾನ್ ಕಠಿಣ ಪ್ರತಿಕ್ರಿಯೆ ನೀಡಿದೆ. ಅಮೆರಿಕ ಯಾವುದೇ “ಮೂರ್ಖತನದ ನಿರ್ಧಾರ” ಕೈಗೊಂಡರೆ ತಕ್ಕ ಪ್ರತ್ಯುತ್ತರ ನೀಡಲು ತನ್ನ ಸಶಸ್ತ್ರ ಪಡೆಗಳು ಹೈ ಅಲರ್ಟ್‌ನಲ್ಲಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಒಟ್ಟಿನಲ್ಲಿ, ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಟ್ಟಿದ್ದು, ಜಾಗತಿಕ ಮಟ್ಟದಲ್ಲಿ ಆತಂಕ ಹೆಚ್ಚಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular