Monday, August 17, 2026
Homeದೇಶಕೋಲ್ಕತಾ : ಪಶ್ಚಿಮ ಬಂಗಾಳದ ಎರಡನೇ ಹಂತದ 142 ವಿಧಾನ ಸಭಾ ಕ್ಷೇತ್ರಗಳ ಪ್ರಚಾರ ಅಂತ್ಯ,ಮತದಾರರ...

ಕೋಲ್ಕತಾ : ಪಶ್ಚಿಮ ಬಂಗಾಳದ ಎರಡನೇ ಹಂತದ 142 ವಿಧಾನ ಸಭಾ ಕ್ಷೇತ್ರಗಳ ಪ್ರಚಾರ ಅಂತ್ಯ,ಮತದಾರರ ಸೆಳೆಯಲು ಮೋದಿ, ಶಾ, ನಿತಿನ್, ಮಮತಾ, ಕೊನೆಯ ಪ್ರಯತ್ನ.

ಕೋಲ್ಕತಾ : ಪಶ್ಚಿಮ ಬಂಗಾಳದ ಎರಡನೇ ಹಂತದ 142 ವಿಧಾನ ಸಭಾ ಕ್ಷೇತ್ರಗಳ ಪ್ರಚಾರ ಏ.೨೭ರಂದು ಮುಕ್ತಾಯಗೊಳ್ಳಲಿದ್ದು, ಪ್ರಮುಖ ಪಕ್ಷಗಳಾದ ಟಿಎಂಸಿ, ಬಿಜೆಪಿ, ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಭಾರೀ ಭರ್ಜರಿ ರೋಡ್‌ಶೋ, ರ‍್ಯಾಲಿಗಳನ್ನು ನಡೆಸಿದವು. ಪ್ರಧಾನಿ ನರೇಂದ್ರ ಮೋದಿ 24 ಪರಗಣ ಜಿಲ್ಲೆಯ ಬನಗಾವ್ ಮತ್ತು ಹೂಗ್ಲಿ ಜಿಲ್ಲೆಯ ಆರಂಭಾಗ್‌ಗಳಲ್ಲಿ ಬೃಹತ್ ಸಭೆಗಳನ್ನುದ್ದೇಶಿಸಿ ಮಾತನಾಡಿ, ಟಿಎಂಸಿಯ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವಂತೆ ಕರೆ ನೀಡಿದರು. ಗೃಹಸಚಿವ ಅಮಿತ್ ಶಾ ನಾಡಿಯಾ ಜಿಲ್ಲೆಯ ತೆಹಟ್ಟಾದಲ್ಲಿರ‍್ಯಾಲಿ ನಡೆಸಿ, ಮಹಿಳೆಯರಿಗೆ ತಿಂಗಳಿಗೆ ೩೦೦೦ ಮತ್ತು ನಿರುದ್ಯೋಗಿಗಳಿಗೆ ಮಾಸಿಕ 300 ರೂ.ಗಳ ಸಹಾಯನೀಡುವ ಭರವಸೆಯನ್ನು ಪುನರುಚ್ಚರಿಸಿದರು.

ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಬಾರಾ ನಗರದಲ್ಲಿ ರೋಡ್ ಶೋ ನಡೆಸಿದರೆ, ಬಂಗಾಳ ವಿಧಾನಸಭೆ ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತುಷ್ಠೀಕರಣ ರಾಜಕಾರಣದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಹುತೇಕ ತಮ್ಮ ಕ್ಷೇತ್ರವಾದ ಭವಾನಿಪುರದಲ್ಲೇ ಉಳಿದು ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಪಕ್ಷದ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನಜಿ ಪೂರ್ವ ವರ್ಧಮಾನ್ ಜಿಲ್ಲೆಯ ಪೂರ್ವಸ್ಥಳೀ ಉತ್ತರದಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು.

ತೃಣಮೂಲಕ ಕಾಂಗ್ರೆಸ್ ನಾಯಕ ಕುನಾಲ್ ಘೋಷ್ ಈಗಾಗಲೇ ನಡೆದಿರುವ ಮೊದಲ ಹಂತದ ಚುನಾವಣೆಯಲ್ಲಿ ಟಿಎಂಸಿ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನ ರಾಜ್ಯಸಭಾ ಸಂಸದರಾದ ಪ್ರಮೋದ್ ತಿವಾರಿ, ಅಖಿಲೇಶ್ ಪ್ರಸಾದ್ ಈ ಚುನಾವಣೆಯಲ್ಲಿ ಕಾಂಗ್ರೆಸ್ ನಿರ್ಣಾಯಕ ಪಾತ್ರ ವಹಿಸಲಿದೆ ಎಂದಿದೆ. ಕಾAಗ್ರೆಸ್ ೨೦ ವರ್ಷಗಳ ನಂತರ ಯಾವುದೇ ಮೈತ್ರಿ ಇಲ್ಲದೆ ಸ್ವತಂತ್ರವಾಗಿ ಸ್ಪರ್ಧಿಸಿರುವುದು ವಿಶೇಷ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ 93.19% ಮತದಾನವಾಗಿದೆ ಎಂದು ಚುನಾವಣಾ ಆಯೋಗ ಅಂಕಿಅAಶಗಳನ್ನು ಬಿಡುಗಡೆ ಮಾಡಿದೆ. ಇದು ಸ್ವಾತಂತ್ರö್ಯ ಬಂದ ನಂತರ ಅತಿ ಹೆಚ್ಚಿನ ಪ್ರಮಾಣದ ಮತದಾನವಾಗಿದೆ ಎಂದು ಆಯೋಗ ತಿಳಿಸಿದೆ. ಏಪ್ರಿಲ್ 23 ರಂದು ಮೊದಲ ಹಂತದ ಚುನಾವಣೆ 16 ಜಿಲ್ಲೆಗಳ 152 ಕ್ಷೇತ್ರಗಳಲ್ಲಿ ನಡೆದಿತ್ತು. ಇದರಲ್ಲಿ 3.61 ಕೋಟಿ ಮತದಾರರ ಪೈಕಿ 3.26 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಕೂಚ್ ಬಿಹಾರ್ ಜಿಲ್ಲೆಯಲ್ಲಿ 96.2%, ದಕ್ಷಿಣ ದಿನಜ್‌ಪುರದಲ್ಲಿ 95.44%, ಮಾಲ್ದಾ ಜಿಲ್ಲೆಯಲ್ಲಿ 94.79% ಮತದಾನವಾಗಿರುವುದು ವಿಶೇಷ. ಎರಡನೇ ಹಂತದ ಚುನಾವಣೆ ಏ.29 ರಂದು ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular