Monday, July 6, 2026
Homeಜಿಲ್ಲೆಕಡಬ: ಬೆನ್ನಟ್ಟಿದ ಕಾಡಾನೆಯ ಗುಂಪು ಮೂವರು ಕಾರ್ಮಿಕರಿಗೆ ಗಾಯ.

ಕಡಬ: ಬೆನ್ನಟ್ಟಿದ ಕಾಡಾನೆಯ ಗುಂಪು ಮೂವರು ಕಾರ್ಮಿಕರಿಗೆ ಗಾಯ.

ಕಡಬ : ಇತ್ತೀಚಿನ ಕಾಡಾನೆಗಳ ಹಾವಳಿಗಳು ಜಾಸ್ತಿಯಾಗಿದ್ದು ಇದಕ್ಕೆ ಅರಣ್ಯ ಇಲಾಖೆಯ ಬೇಜಾಬ್ದಾರಿಯೇ ಕಾರಣ ಎಂಬುದು ಇಲ್ಲಿನ ನಿವಾಸಿಗಳ ಮಾತು.ಇಲ್ಲಿನ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ರಬ್ಬರ್ ತೋಟದಲ್ಲಿ ಶನಿವಾರ ಬೆಳಗ್ಗೆ ಕಾಡಾನೆಗಳು ಅಟ್ಟಿಸಿಕೊಂಡು ಬಂದಿದ್ದರಿಂದ ಮೂವರು ರಬ್ಬರ್ ಟ್ಯಾಪಿಂಗ್ ಕಾರ್ಮಿಕರು ಗಾಯಗೊಂಡಿದ್ದಾರೆ.

ರಾಜಗೋಪಾಲ್ (49), ನಾಗಪ್ಪ (53) ಮತ್ತು ಶಿವರಾಜ್ (43) ಗಾಯಗೊಂಡ ಕಾರ್ಮಿಕರು. ಎಲ್ಲರನ್ನೂ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾಗ ಆನೆಗಳು ಕಾಣಿಸಿಕೊಂಡಿವೆ. ಆನೆಗಳು ಅವರನ್ನು ಅಟ್ಟಿಸಿಕೊಂಡು ಹೋದಾಗ ಕಾರ್ಮಿಕರು ತಪ್ಪಿಸಿಕೊಳ್ಳುವ ಯತ್ನದಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular