Thursday, August 20, 2026
Homeಜಿಲ್ಲೆಉಡುಪಿ : ರಾಸಾಯನಿಕ ಬಳಸಿ ಹಣ್ಣು ಮಾಡಿದ್ದ 10,890 ಕೆ.ಜಿ. ಬಾಳೆಹಣ್ಣು ಜಪ್ತಿ.

ಉಡುಪಿ : ರಾಸಾಯನಿಕ ಬಳಸಿ ಹಣ್ಣು ಮಾಡಿದ್ದ 10,890 ಕೆ.ಜಿ. ಬಾಳೆಹಣ್ಣು ಜಪ್ತಿ.

ಉಡುಪಿ : ರಾಸಾಯನಿಕ ಬಳಸಿ ಬಾಳೆಕಾಯಿಗಳನ್ನು ಹಣ್ಣು ಮಾಡುತ್ತಿದ್ದ ಮಳಿಗೆಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿ 10,890 ಕೆ.ಜಿ. ಬಾಳೆಹಣ್ಣುಗಳನ್ನು ಜಪ್ತಿ ಮಾಡಿದ್ದಾರೆ.

ಉಡುಪಿಯ ಅಲೆಯೂರು, ಕೆಮ್ತೂರು ಹಾಗೂ ದುಗ್ಗಿಪದವು ಗ್ರಾಮಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡಲಾಗಿದ್ದ ಬಾಳೆಹಣ್ಣುಗಳು ಪತ್ತೆಯಾಗಿವೆ.

ಜಪ್ತಿ ಮಾಡಲಾದ ಬಾಳೆಹಣ್ಣುಗಳ ಒಟ್ಟು ಮೌಲ್ಯ ಸುಮಾರು ₹8.71 ಲಕ್ಷ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಬಾಳೆಹಣ್ಣುಗಳನ್ನು ವಶಕ್ಕೆ ಪಡೆಯಲಾಗಿದೆ.

ಬಳಿಕ ಜಪ್ತಿ ಮಾಡಿದ 10,890 ಕೆ.ಜಿ. ಬಾಳೆಹಣ್ಣುಗಳನ್ನು ಡಂಪಿಂಗ್ ಯಾರ್ಡ್‌ಗೆ ಸಾಗಿಸಿ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular