Sunday, July 26, 2026
Homeಸಿನಿಮಾಹೈದರಾಬಾದ್ : ನಟಿ ರಶ್ಮಿಕಾ ಮಂದಣ್ಣ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಷ,ಪ್ರಾಣಾಪಾಯದಿಂದ ಪಾರು.

ಹೈದರಾಬಾದ್ : ನಟಿ ರಶ್ಮಿಕಾ ಮಂದಣ್ಣ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಷ,ಪ್ರಾಣಾಪಾಯದಿಂದ ಪಾರು.

ಹೈದರಾಬಾದ್ : ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಷ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ರಶ್ಮಿಕಾ ಮಂದಣ್ಣ ಹಾಗೂ ಶ್ರದ್ಧಾದಾಸ್ ಅವರುಗಳು ಮುಂಬೈ ವಿಮಾನ ನಿಲ್ದಾಣದಿಂದ ಹೈದರಾಬಾದ್​ಗೆ ಪ್ರಯಾಣ ಬೆಳೆಸಿದ್ದರು. ಇಬ್ಬರೂ ಒಟ್ಟಿಗೆ ಪ್ರಯಾಣ ಮಾಡುತ್ತಿದ್ದರು. ವಿಮಾನ ಟೇಕ್ ಆಫ್ ಆದ ಬಳಿಕ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ವಿಮಾನ ನಿಲ್ದಾಣವನ್ನು ತುರ್ತು ಭೂಸ್ಪರ್ಷ ಮಾಡಲಾಗಿದೆ.

ರಶ್ಮಿಕಾ ಮಂದಣ್ಣ ಟಾಲಿವುಡ್ ಸ್ಟಾರ್ ಹೀರೋಯಿನ್ ರಶ್ಮಿಕಾ ಮಂದಣ್ಣ ಸದ್ಯ ಬೆರಳೆಣಿಕೆಯ ಪ್ರಾಜೆಕ್ಟ್ಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾನ್ ಇಂಡಿಯಾ, ಲೇಡಿ ಓರಿಯೆಂಟೆಡ್ ಮತ್ತು ಕ್ರೇಜಿ ಕಾಂಬಿನೇಷನ್ ಪ್ರಾಜೆಕ್ಟ್ಗಳೊಂದಿಗೆ ಅವರು ಮೋಸ್ಟ್ ವಾಂಟೆಡ್ ನಾಯಕಿಯಾಗಿದ್ದಾರೆ.

ರಶ್ಮಿಕಾ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮತ್ತೊಬ್ಬ ನಾಯಕಿ ಶ್ರದ್ಧಾ ದಾಸ್ ಜೊತೆಗಿನ ಫೋಟೋವನ್ನು ಹಂಚಿಕೊಂಡು ನಾವು ಇಂದು ಸಾವಿನಿಂದ ಪಾರಾಗಿದ್ದೇವೆ” ಎಂದು ಶೀರ್ಷಿಕೆ ನೀಡಿದ್ದಾರೆ.ಈ ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ.ಎಲ್ಲರೂ ಸುರಕ್ಷಿತವಾಗಿ ಇದ್ದಾರೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular