ಸೊರಬ ; ಸೊರಬ ತಾಲೂಕಿನ ಉಳವ್ವ ವ್ಯಾಪ್ತಿಯ ಗ್ರಾಮಕ್ಕೆ ಅಡ್ಡಾದಿಡ್ಡಿ ನುಗ್ಗಿದ ಚಿರತೆ ಮನೆಯೊಂದರ ಸ್ನಾನಗೃಹದಲ್ಲಿ ಅಡಗಿ ಕುಳಿತಿದ್ದ ನಾಲ್ಕು ವರ್ಷದ ಗಂಡು ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ತಂಡ ಶನಿವಾರ ಸೆರೆ ಹಿಡಿದಿದಿದ್ದಾರೆ.
ಉಳವಿ ಅರಣ್ಯ ವ್ಯಾಪ್ತಿಯ ಗ್ರಾಮಕ್ಕೆ ನುಗ್ಗಿದ್ದ ಚಿರತೆ ಶನಿವಾರ ನಸುಕಿನಲ್ಲಿ ಶಿವಕುಮಾರ್ ಎಂಬುವವರ ಮನೆಯ ಸ್ನಾನಗೃಹಕ್ಕೆ ನುಗ್ಗಿದೆ.
ದೊಡ್ಡ ಬೆಕ್ಕನ್ನು ಗಮನಿಸಿದ ಮನೆಯಲ್ಲಿದ್ದವರು ಸ್ನಾನಗೃಹಕ್ಕೆ ಹೊರಗಿನಿಂದ ಬೀಗ ಹಾಕಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ತ್ಯಾವರೆಕೊಪ್ಪ ಹುಲಿ ಹಾಗೂ ಸಿಂಹ ಸಫಾರಿ ಪಶು ವೈದ್ಯಾಧಿಕಾರಿ ಮುರಳಿ ಮನೋಹರ್ ನೇತೃತ್ವದ ಅಧಿಕಾರಿಗಳ ತಂಡ ಚಿರತೆ ಸೆರೆ ಹಿಡಿಯಲು ಗ್ರಾಮಕ್ಕೆ ತೆರಳಿದ್ದರು ಈ ತಂಡವು ಛಾವಣಿಯ ಹಂಚುಗಳನ್ನು ತೆರೆಯುವ ಮೂಲಕ ಸ್ನಾನಗೃಹಕ್ಕೆ ಪ್ರವೇಶಿಸಿ ದೊಡ್ಡ ಚಿರತೆಯನ್ನು ಸೆರೆಹಿಡಿಯುವುದರಲ್ಲಿ ಯಶಸ್ವಿಯಾದರು.
ಪಶುವೈದ್ಯಾಧಿಕಾರಿ ಮುರಳಿ ಮೋಹನ್ ಮಾತನಾಡಿ, ನಾಲ್ಕೈದು ದಿನಗಳ ಹಿಂದೆ ಚಿರತೆ ಬಲೆಯಲ್ಲಿ ಸಿಲುಕಿ ಗಾಯಗೊಂಡಿತ್ತು. ಆದರೆ, ಬಲೆಯಿಂದ ತಪ್ಪಿಸಿಕೊಂಡು ಮನೆಯ ಬಾತ್ ರೂಂನಲ್ಲಿ ಆಶ್ರಯ ಪಡೆದಿದೆ ಎಂದು ಹೇಳಿದ್ದಾರೆ.