Wednesday, May 13, 2026
Flats for sale
Homeವಿದೇಶವಾಷಿಂಗ್ಟನ್ : ಯುದ್ಧ ಅಂತ್ಯಕ್ಕೆ ಇರಾನ್ ಪ್ರಸ್ತಾವ ತಿರಸ್ಕರಿಸಿದ ಟ್ರಂಪ್ : “ನನಗೆ ಇಷ್ಟವಾಗಿಲ್ಲ, ಅದಕ್ಕಾಗಿ...

ವಾಷಿಂಗ್ಟನ್ : ಯುದ್ಧ ಅಂತ್ಯಕ್ಕೆ ಇರಾನ್ ಪ್ರಸ್ತಾವ ತಿರಸ್ಕರಿಸಿದ ಟ್ರಂಪ್ : “ನನಗೆ ಇಷ್ಟವಾಗಿಲ್ಲ, ಅದಕ್ಕಾಗಿ ಒಪ್ಪುವುದಿಲ್ಲ” ಎಂದ ಅಮೆರಿಕ ಅಧ್ಯಕ್ಷ.

ವಾಷಿಂಗ್ಟನ್ : ಯುದ್ಧ ಅಂತ್ಯಗೊಳಿಸುವ ಉದ್ದೇಶದಿಂದ ಇರಾನ್ ನೀಡಿದ್ದ ಪ್ರಸ್ತಾವವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿರಸ್ಕರಿಸಿದ್ದಾರೆ. ಪ್ರಸ್ತಾವದ ವಿವರಗಳನ್ನು ಬಹಿರಂಗಪಡಿಸದೇ, ಅದನ್ನು “ಸ್ವೀಕರಾರ್ಹವಲ್ಲ” ಎಂದು ಅವರು ಹೇಳಿದ್ದಾರೆ.

ಟ್ರಂಪ್ ತಮ್ಮ ‘ಟ್ರೂತ್ ಸೋಶಿಯಲ್’ ಖಾತೆಯಲ್ಲಿ ಪ್ರತಿಕ್ರಿಯಿಸಿ, “ಇರಾನ್ ಪ್ರತಿನಿಧಿಗಳು ನೀಡಿರುವ ಪ್ರಸ್ತಾವವನ್ನು ನಾನು ಓದಿದ್ದೇನೆ. ಅದು ನನಗೆ ಇಷ್ಟವಾಗಲಿಲ್ಲ. ಆದ್ದರಿಂದ ಅದನ್ನು ಸ್ವೀಕರಿಸುವ ಪ್ರಶ್ನೆಯೇ ಇಲ್ಲ,” ಎಂದು ತಿಳಿಸಿದ್ದಾರೆ.

ಇದೇ ವೇಳೆ ಅಮೆರಿಕದ ‘ಅಕ್ಸಿಯೋಸ್’ ಪತ್ರಿಕೆಗೆ ಪ್ರತಿಕ್ರಿಯಿಸಿದ ಟ್ರಂಪ್, “ಇರಾನ್ ಹಲವು ದಶಕಗಳಿಂದ ಅಮೆರಿಕದೊಂದಿಗೆ ಆಟವಾಡುತ್ತಿದೆ. ಈಗ ಅವರ ಪ್ರಸ್ತಾವದಲ್ಲಿ ಒಪ್ಪಿಕೊಳ್ಳುವಂತಹ ಅಂಶಗಳಿಲ್ಲ,” ಎಂದು ಹೇಳಿದ್ದಾರೆ.

ಈ ನಡುವೆ ರಿಪಬ್ಲಿಕನ್ ಸೆನೆಟರ್ ಲಿಂಡ್ಸೆ ಗ್ರಾಹಂ, ಇರಾನ್ ವಿರುದ್ಧ ಮಿಲಿಟರಿ ಕ್ರಮವನ್ನು ಪರಿಗಣಿಸಬೇಕೆಂದು ಟ್ರಂಪ್ ಅವರಿಗೆ ಸಲಹೆ ನೀಡಿದ್ದಾರೆ.

“ಇರಾನ್ ಆಡಳಿತದ ವರ್ತನೆ ಬದಲಿಸಲು ಅಧ್ಯಕ್ಷ ಟ್ರಂಪ್ ರಾಜತಾಂತ್ರಿಕ ಪ್ರಯತ್ನ ನಡೆಸುತ್ತಿರುವುದು ಶ್ಲಾಘನೀಯ. ಆದರೆ ಅಂತರರಾಷ್ಟ್ರೀಯ ಹಡಗುಗಳ ಮೇಲೆ ದಾಳಿ, ಮಧ್ಯಪ್ರಾಚ್ಯದ ಮಿತ್ರರ ಮೇಲೆ ನಿರಂತರ ಬೆದರಿಕೆ ಹಾಗೂ ಅಮೆರಿಕದ ಪ್ರಸ್ತಾವಗಳಿಗೆ ಅಸ್ವೀಕಾರಾರ್ಹ ಪ್ರತಿಕ್ರಿಯೆ ನೀಡುತ್ತಿರುವ ಹಿನ್ನೆಲೆ ಕಠಿಣ ಕ್ರಮ ಅವಶ್ಯಕ,” ಎಂದು ಅವರು ಹೇಳಿದ್ದಾರೆ.

ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕ ನೌಕಾಪಡೆಯ ‘ಪ್ರೊಜೆಕ್ಟ್ ಫ್ರೀಡಂ ಪ್ಲಸ್’ ಕಾರ್ಯಾಚರಣೆಯನ್ನು ಕೂಡ ಗ್ರಾಹಂ ಸಮರ್ಥಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular