Monday, May 18, 2026
Flats for sale
Homeವಿದೇಶವಾಷಿಂಗ್ಟನ್ : ಭೋಜನಕೂಟದ ಸಭೆಯಲ್ಲಿ ಶೂಟ್‌ಔಟ್ : ಟ್ರಂಪ್ , ಜೆ.ಡಿ.ವ್ಯಾನ್ಸ್ ಪಾರು.

ವಾಷಿಂಗ್ಟನ್ : ಭೋಜನಕೂಟದ ಸಭೆಯಲ್ಲಿ ಶೂಟ್‌ಔಟ್ : ಟ್ರಂಪ್ , ಜೆ.ಡಿ.ವ್ಯಾನ್ಸ್ ಪಾರು.

ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್,ಅವರ ಪತ್ನಿ ಮಲೇನಿಯಾ ಹಾಗೂ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ನಂಥ ಗಣ್ಯರಿದ್ದ ಭೋಜನಕೂಟದಲ್ಲಿ ದುಷ್ಕರ್ಮಿಯೊಬ್ಬ ಹಲವು ಸುತ್ತು ಗುಂಡಿನ ದಾಳಿ ನಡೆಸಿದರೂ ಅದೃಷ್ಟವಶಾತ್ ನೂರಕ್ಕೂ ಹೆಚ್ಚು ಅತಿಥಿಗಳು ಸುರಕ್ಷಿತ ರೀತಿಯಲ್ಲಿ ಪಾರಾದ ಘಟನೆ ಶನಿವಾರ ರಾತ್ರಿ ನಡೆದಿದೆ.

ಶ್ವೇತಭವನದ ವರದಿಗಾರರಿಗಾಗಿ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನಲ್ಲಿ ಈ ಭೋಜನಕೂಟ ಏರ್ಪಡಿಸಲಾಗಿತ್ತು. ಘಟನೆಯಲ್ಲಿ ಸಿಕ್ರೆಟ್ ಸರ್ವಿಸ್ ಅಧಿಕಾರಿಯೊಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆತ ಬುಲೆಟ್ ನಿರೋಧಕ ಜಾಕೆಟ್ ಧರಿಸಿದ್ದರಿಂದ ಪ್ರಾಣಾಪಾಯವಿಲ್ಲದೇ ಪಾರಾಗಿದ್ದಾರೆ. ಕ್ಯಾಲಿಫೋರ್ನಿಯಾದ ಟೊರೆನ್ಸ್ ಎಂಬಲ್ಲಿನ 31 ವರ್ಷದ ಕೋಲ್ ಟೊಮಾಸ್ ಆಲೆನ್ ಎಂಬಾತ ಈ ದಾಳಿಕೋರನಾಗಿದ್ದು ಆತನನ್ನು ಸಿಕ್ರೆಟ್ ಸರ್ವಿಸ್ ಸಂಸ್ಥೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಸೋಮವಾರ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ನಿರ್ಧರಿಸಲಾಗಿದೆ. ಗುಂಡಿನ ದಾಳಿ ನಡೆಯುತ್ತಿದ್ದಂತೆಯೇ ಎಲ್ಲಾ ಅತಿಥಿಗಳನ್ನು ಮೇಜಿನಡಿ ಬಚ್ಚಿಟ್ಟುಕೊಳ್ಳುವಂತೆ ಸಿಕ್ರೆಟ್ ಅಧಿಕಾರಿಗಳು ಸೂಚಿಸಿದಲ್ಲದೆ, ಆನಂತರ ಅವರೆಲ್ಲರನ್ನೂ ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ಒಯ್ದಿದ್ದರು.

ಹೋಟೆಲ್ ಹಿಲ್ಟನ್ ಒಳಗೆ ನುಗ್ಗಲು ಯತ್ನಿಸಿದ ಶಸ್ತçಧಾರಿಯ ಗುರಿ ಟ್ರಂಪ್ ಮತ್ತು ಅವರ ಆಡಳಿತದ ಅಧಿಕಾರಿಗಳೇ ಆಗಿದ್ದರು ಎಂದು ಅಮೆರಿಕದ ಅಟಾರ್ನಿ ಜನರಲ್ ಟಾಡ್ ಬ್ಲಾನ್ಷ್ ಹೇಳಿದ್ದಾರೆ. ಈ ಕುರಿತು ಇನ್ನೂ ಪ್ರಾಥಮಿಕ ತನಿಖೆ ನಡೆಯುತ್ತಿದೆ ಎಂದಿರುವ ಬ್ಲಾನ್ಷ್, ಆರೋಪಿಯು ತನಿಖಾಧಿಕಾರಿಗಳೊಂದಿಗೆ ಸಹಕರಿಸುತ್ತಿಲ್ಲ. ಸೋಮವಾರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದಿದ್ದಾರೆ.

ಕೋಲ್ ಟೊಮಾಸ್ ಲಾಸ್ ಏಂಜಲೀಸ್‌ನಿಂದ ಷಿಕಾಗೋವರೆಗೆ ನಂತರ ಅಲ್ಲಿಂದ ವಾಷಿಂಗ್ಟನ್ ಡಿಸಿಗೆಟ್ರೈನ್ ನಲ್ಲಿ ಬಂದಿದ್ದಾನೆ. ಹೋಟೆಲ್‌ಗೆ ಬಂದ ನAತರವೇ ಶಸ್ತಾçಸ್ತçಗಳನ್ನು ಅಸೆಂಬಲ್ ಮಾಡಿದ್ದಾನೆ. ದಾಳಿಯ ಸ್ಥಳ ತುಂಬ ದೂರ ಆಗಬಾರದು ಎನ್ನುವ ಕಾರಣಕ್ಕೆ ಇದೇ ಹೋಟೆಲಲ್ಲಿ ಉಳಿದಿದ್ದಾನೆ ಎಂದುಅವರು ವಿವರಿಸಿದ್ದಾರೆ. ಆದರೆ ಟ್ರಂಪ್ ಮೇಲೆ ಏಕೆ ದಾಳಿ ಮಾಡಲು ಯತ್ನಿಸಿದ ಎನ್ನುವ ಸಂಗತಿಯನ್ನು ಇನ್ನೂ ಬಾಯಿಬಿಟ್ಟಿಲ್ಲ. ಟೊಮಾಸ್ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವನ ಡಿಜಿಟಲ್ ಉಪಕರಣಗಳನ್ನೆಲ್ಲ ವಶಕ್ಕೆ ತೆಗೆದುಕೊಂಡು ಯಾವುದಾದರೂ ಮಾಹಿತಿ ದೊರೆಯಬಹುದೇ ಎಂದು ಪರಿಶೀಲಿಸುತ್ತಿದ್ದಾರೆ.

ಇರಾನ್ ಕೈವಾಡ? : ಇದರ ಹಿಂದೆ ಇರಾನ್ ಕೈವಾಡವೂ ಇರಬಹುದೇ ಎಂದು ಪ್ರಶ್ನೆಗಳೂ ಎದ್ದಿರುವುದರಿಂದ ಆ ದಿಕ್ಕಿನಲ್ಲೂ ತನಿಖೆ ನಡೆಸಲಾಗುತ್ತಿದೆ.2020 ರಲ್ಲಿ ಇರಾನ್ ಸೇನಾ ಮುಖ್ಯಸ್ಥ ಖಾಸಿಂ ಸೊಲೇಮಾನಿ ಹತ್ಯೆಯ ಬಳಿಕ ಟ್ರಂಪ್ ವಿರುದ್ಧ ಇರಾನ್ ಕೂಡ ಬೆದರಿಕೆ ಹಾಕಿದ್ದು ರಹಸ್ಯವೇನಲ್ಲ. ಹೀಗಾಗಿ ಈ ಕುರಿತೂ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ಮತ್ತೊಂದು ಪ್ರಶ್ನೆ ತನಿಖಾಧಿಕಾರಿಗಳ ಮುಂದೆ ಇರುವುದು, ಅಮೆರಿಕದ ರಾಜಕೀಯ ವಿರೋಧಿಗಳೇ ಟ್ರಂಪ್ ಹತ್ಯೆಗೆ ಸಂಚು ರೂಪಿಸಿದ್ದರೇ ಎನ್ನುವುದು. ಇದಕ್ಕಾಗಿ ಆರೋಪಿ ಟೊಮಾಸ್‌ನ ಬ್ರೌಸಿಂಗ್ ಹಿಸ್ಟರಿಯನ್ನು ಸರ್ಚ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಆತ ಮಾಡಿರುವ ಪೋಸ್ಟ್ ಮತ್ತು ಕಾಮೆಂಟ್‌ಗಳನ್ನೂ ಪರಿಶೀಲಿಸಲಾಗುತ್ತಿದೆ

RELATED ARTICLES

LEAVE A REPLY

Please enter your comment!
Please enter your name here

Most Popular