Friday, July 17, 2026
Homeರಾಜ್ಯಮೈಸೂರು : ಮದುವೆಯಾಗಿ ಕೇವಲ 15 ದಿನ ; ಹೆಲ್ಮೆಟ್ ಧರಿಸದ ನವವಧು ಅಪಘಾತದಲ್ಲಿ ಸಾವು.

ಮೈಸೂರು : ಮದುವೆಯಾಗಿ ಕೇವಲ 15 ದಿನ ; ಹೆಲ್ಮೆಟ್ ಧರಿಸದ ನವವಧು ಅಪಘಾತದಲ್ಲಿ ಸಾವು.

ಮೈಸೂರು : ಮದುವೆಯಾಗಿ ಕೇವಲ 15 ದಿನಗಳಾಗಿದ್ದ ನವವಧುವೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ಮೈಸೂರು ತಾಲೂಕಿನ ಆರ್.ಟಿ.ನಗರದ ಬಳಿ ನಡೆದಿದೆ.

ಮೈಸೂರು ತಾಲೂಕಿನ ಮಾಕನಹುಂಡಿ ಗ್ರಾಮದ ಮೇಘನಾ (20) ಮೃತಪಟ್ಟ ನವವಧು. ಅವರನ್ನು 15 ದಿನಗಳ ಹಿಂದಷ್ಟೇ ಬಿದರಗೂಡು ಗ್ರಾಮದ ಪುನೀತ್ ಅವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಗುರುವಾರ ಸಂಜೆ ದಂಪತಿ ಬೈಕ್‌ನಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಹೆಲ್ಮೆಟ್ ಧರಿಸದಿದ್ದ ಮೇಘನಾ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಪತಿ ಪುನೀತ್ ಅವರ ತಲೆ, ಕೈ ಹಾಗೂ ಕಾಲಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular