Thursday, August 20, 2026
Homeಜಿಲ್ಲೆಮುಲ್ಕಿ : ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ – ಸಿಸಿ ಕ್ಯಾಮೆರಾದಿಂದ ಕಳ್ಳನ ಸೆರೆ, ಆರೋಪಿ ಅರೆಸ್ಟ್.

ಮುಲ್ಕಿ : ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ – ಸಿಸಿ ಕ್ಯಾಮೆರಾದಿಂದ ಕಳ್ಳನ ಸೆರೆ, ಆರೋಪಿ ಅರೆಸ್ಟ್.

ಮುಲ್ಕಿ : ಮುಲ್ಕಿಯ ಬೆಳ್ಳಾಯರು ಕೋಲ್ನಾಡು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದಲ್ಲಿ ಮಧ್ಯರಾತ್ರಿ ಕಳ್ಳತನಕ್ಕೆ ಯತ್ನಿಸಿದ 28 ವರ್ಷದ ರವಿ ಎಂಬಾತನನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.

ಹಗ್ಗದ ಸಹಾಯದಿಂದ ದೇವಸ್ಥಾನದ ಮೇಲ್ಭಾಗಕ್ಕೆ ಹತ್ತಿದ ಆರೋಪಿ, ಕಬ್ಬಿಣದ ಜಾಲಿ ತುಂಡರಿಸಿ ಒಳನುಗ್ಗಿದ್ದ. ಕಾಣಿಕೆ ಡಬ್ಬಿ ಜಾಲಾಡಿ, ಬಳಿಕ ಸಿಸಿ ಕ್ಯಾಮೆರಾಗೆ ಹಾನಿ ಮಾಡಲು ಯತ್ನಿಸಿದ್ದಾನೆ. ಕ್ಯಾಮೆರಾ ಮೂಲಕ ಮಾಹಿತಿ ಪಡೆದ ‘ಸೈನ್ ಇನ್ ಸೆಕ್ಯೂರಿಟಿ’ ಸಂಸ್ಥೆ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಸ್ಥಳೀಯರು ದೇವಸ್ಥಾನವನ್ನು ಸುತ್ತುವರಿದಿದ್ದಾರೆ ಪರಾರಿಯಾಗಲು ಯತ್ನಿಸಿದ ಆರೋಪಿ ದೇವಸ್ಥಾನದ ಸುಬ್ರಹ್ಮಣ್ಯ ಗುಡಿಯಲ್ಲಿ ಅಡಗಿದ್ದ ವೇಳೆ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯ ಕಳ್ಳತನದ ಯತ್ನ ಹಾಗೂ ಸಿಸಿ ಕ್ಯಾಮೆರಾಗೆ ಹಾನಿ ಮಾಡುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಪ್ರಕರಣ ದಾಖಲಿಸಿಕೊಂಡಿರುವ ಮುಲ್ಕಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಭಾರೀ ಕಳ್ಳತನಕ್ಕೆ ಬ್ರೇಕ್ ಬಿದ್ದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular