ಮುಂಬೈ : ವಿಕ್ಕಿ ಕೌಶಲ್ ಅಭಿನಯದ ಛಾವಾ ಚಿತ್ರ 2025 ರ ಬ್ಲಾಕ್‌ಬಸ್ಟರ್ ಚಿತ್ರವಾಗಿದೆ. ಚಿತ್ರದ ಬಿರುಗಾಳಿಯ ಇನ್ನಿಂಗ್ಸ್ ಬಾಕ್ಸ್ ಆಫೀಸ್‌ನಲ್ಲಿ ಮುಂದುವರೆದಿದೆ.10 ದಿನಗಳಲ್ಲಿ 300 ಕೋಟಿ ರೂ. ಗಳ ಗಡಿ ದಾಟಿರುವ ಈ ಚಿತ್ರ ಶೀಘ್ರದಲ್ಲೇ 400 ಕೋಟಿ ರೂ.ಗಳ ಕ್ಲಬ್‌ಗೆ ಸೇರುವ ಸಾಧ್ಯತೆ ಇದೆ.
ಚಿತ್ರ ಒಂದರ ನಂತರ ಒಂದರಂತೆ ಹಲವು ದಾಖಲೆಗಳನ್ನು ಮುರಿಯುತ್ತಿದೆ. ಛಾವಾ ಚಿತ್ರ ಛತ್ರಪತಿ ಸಂಭಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಈ ಚಿತ್ರ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ಗಳಿಸುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಸಾಕಷ್ಟು ಗಳಿಕೆ ಮಾಡುತ್ತಿದೆ. ಇದು 2025 ರ ಅತಿ ದೊಡ್ಡ ಹಿಟ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಛಾವಾ ಚಿತ್ರವನ್ನು ಸುಮಾರು 130 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಈ ಚಿತ್ರ ಸುಮಾರು 250 ಕೋಟಿ ರೂಪಾಯಿ ಗಳಿಸಿದೆ.
ಛಾವಾ ಬಿಡುಗಡೆಯಾಗಿ 11 ದಿನಗಳು ಕಳೆದಿವೆ. ಚಿತ್ರವು ತನ್ನ ಮೊದಲ ವಾರದಲ್ಲೇ ಅನೇಕ ದಾಖಲೆಗಳನ್ನು ಮುರಿದು ಸಾಕಷ್ಟು ಗಳಿಕೆಯನ್ನು ಗಳಿಸುತ್ತಿದೆ. ಚಿತ್ರ 11 ನೇ ದಿನ ಸಕ್ನಿಲ್ಕ್ ವರದಿಯ ಪ್ರಕಾರ,18.50 ಕೋಟಿ ರೂ. ಗಳಿಸಿದೆ ಮತ್ತು ಇಲ್ಲಿಯವರೆಗೆ ಒಟ್ಟು 345.25 ಕೋಟಿ ರೂ. ಸಂಗ್ರಹಿಸಿದೆ. 12 ನೇ ದಿನದ ಅಂಕಿ-ಅAಶಗಳು ಹೊರಬರಲಿವೆ. ವಿಕ್ಕಿ ಅವರ ವೃತ್ತಿಜೀವನದ ಅತ್ಯುತ್ತಮ ಚಿತ್ರ, ಲಕ್ಷ್ಮಣ್ ಉಟೇಕರ್ ನಿರ್ದೇಶನದ ಮತ್ತು ವಿಕ್ಕಿ ಕೌಶಲ್, ರಶ್ಮಿಕಾ ಮಂದಣ್ಣ, ಅಶುತೋಷ್ ರಾಣಾ, ದಿವ್ಯಾ ದತ್ತ ಮತ್ತು ಅಕ್ಷಯ್ ಖನ್ನಾ ಅವರಂತಹ ತಾರೆಯರು ನಟಿಸಿರುವ ಛಾವಾ ಫೆಬ್ರವರಿ ೧೪ ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.