Monday, September 21, 2026
Homeವಿದೇಶಮಾಸ್ಕೋ : ರಷ್ಯಾ ಸಂಸತ್ ಚುನಾವಣೆ ವೇಳೆ ಉಕ್ರೇನ್‌ನಿಂದ 1,600ಕ್ಕೂ ಅಧಿಕ ಡ್ರೋನ್ ದಾಳಿ.

ಮಾಸ್ಕೋ : ರಷ್ಯಾ ಸಂಸತ್ ಚುನಾವಣೆ ವೇಳೆ ಉಕ್ರೇನ್‌ನಿಂದ 1,600ಕ್ಕೂ ಅಧಿಕ ಡ್ರೋನ್ ದಾಳಿ.

ಮಾಸ್ಕೋ : ರಷ್ಯಾ–ಉಕ್ರೇನ್ ಯುದ್ಧದ ನಡುವೆ ಉಕ್ರೇನ್ ಸೇನೆ ರಷ್ಯಾದ ವಿವಿಧ ಪ್ರದೇಶಗಳ ಮೇಲೆ ರಾತ್ರಿ ವೇಳೆ 1,600ಕ್ಕೂ ಅಧಿಕ ಡ್ರೋನ್‌ಗಳಿಂದ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ರಷ್ಯಾದ ಸಂಸತ್ ಚುನಾವಣೆಯ ಅಂತಿಮ ದಿನದ ಮತದಾನ ಮುಕ್ತಾಯದ ಸಂದರ್ಭದಲ್ಲಿ ದಾಳಿ ನಡೆದಿದ್ದು, ನೂರಾರು ಡ್ರೋನ್‌ಗಳು ಮಾಸ್ಕೋವನ್ನು ಗುರಿಯಾಗಿಸಿಕೊಂಡಿದ್ದವು ಎನ್ನಲಾಗಿದೆ.

ಮಾಸ್ಕೋ ಮೇಯರ್ ನೀಡಿದ ಮಾಹಿತಿ ಪ್ರಕಾರ, ದಾಳಿಯಲ್ಲಿ ತೈಲ ಘಟಕ ಹಾಗೂ ವಸತಿ ಕಟ್ಟಡಕ್ಕೆ ಹಾನಿಯಾಗಿದೆ. ಮೂವರು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಲಾಗಿದೆ.

ದಾಳಿಗೆ ಸಂಬಂಧಿಸಿದ ವೀಡಿಯೋವನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್‌ಸ್ಕಿ ಹಂಚಿಕೊಂಡಿದ್ದಾರೆ. ಏತನ್ಮಧ್ಯೆ, ರಷ್ಯಾ–ಉಕ್ರೇನ್ ಯುದ್ಧಕ್ಕೆ ಅಂತ್ಯ ಕಾಣಿಸಲು ಅಮೆರಿಕ ರಾಜತಾಂತ್ರಿಕ ಪ್ರಯತ್ನಗಳನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲೇ ಈ ದಾಳಿ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular