Sunday, September 27, 2026
Homeಜಿಲ್ಲೆಮಂಗಳೂರು : ವಾಮಂಜೂರು ಸಾರ್ವಜನಿಕ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಮಂಗಳೂರು : ವಾಮಂಜೂರು ಸಾರ್ವಜನಿಕ ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಮಂಗಳೂರು : ವಾಮಂಜೂರು ಶ್ರೀರಾಮನಗರ ಶ್ರೀರಕ್ತೇಶ್ವರಿ ಹಾಗೂ ಪಂಚದೇವತಾ ಸಾನಿಧ್ಯದ ಆಶ್ರಯದಲ್ಲಿ ನಡೆಯಲಿರುವ 5ನೇ ವರ್ಷದ ಸಾರ್ವಜನಿಕ ವಾಮಂಜೂರು ಶಾರದಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಂಡಿತು.

ವಾಮಂಜೂರು ತೆಕ್ಕಿಬೆಟ್ಟು ಶ್ರೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಮಂಜೂರು ಅಮೃತೇಶ್ವರ ದೇವಸ್ಥಾನದ ಅರ್ಚಕ ಸತ್ಯನಾರಾಯಣ ಹೊಳ್ಳ, ಉದ್ಯಮಿ ತಿರುವೈಲುಗುತ್ತು ನವೀನ್ ಚಂದ್ರ ಆಳ್ವ, ಪಬ್ಲಿಕ್ ಟಿವಿ ಬ್ಯೂರೋಚೀಫ್ ಸುಖ್ ಪಾಲ್ ಪೊಳಲಿ, ವಿಶ್ವ ಹಿಂದೂ ಪರಿಷತ್ ಮುಖಂಡ ವಸಂತ್ ಸುವರ್ಣ ಗುರುಪುರ, ಉದ್ಯಮಿ ರವಿ, ಜಾರಪ್ಪ ಪೂಜಾರಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಅಕ್ಟೋಬರ್ 16ರಿಂದ 22ರವರೆಗೆ ಶಾರದಾ ಮಹೋತ್ಸವ ನಡೆಯಲಿದ್ದು, ಈ ಸಂದರ್ಭದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಅನ್ನಸಂತರ್ಪಣೆ ಆಯೋಜಿಸಲಾಗಿದೆ.

ಅಕ್ಟೋಬರ್ 22ರಂದು ಬೃಹತ್ ಶೋಭಾಯಾತ್ರೆಯೊಂದಿಗೆ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular