ಮಂಗಳೂರು ; ಮಂಗಳೂರಿನಲ್ಲಿ ಮಂಗಳಮುಖಿಯಿಂದ ಗಂಭೀರ ಆರೋಪ ನ್ಯಾಯಾಧೀಶರ ಸಮಕ್ಷಮದಲ್ಲೇ ಮಂಗಳಮುಖಿ ನಿಖಿಲಾ ಮಾಡಿದ್ದಾರೆ.
ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಜಾಗೃತಿ , ಅರಿವು ಕಾರ್ಯಾಗಾರ ಕಾರ್ಯಕ್ರಮ ಮಂಗಳೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಂದರ್ಭದಲ್ಲಿ ಈ ಹೇಳಿದ್ದಾರೆ.
ಘಟನೆಯ ಬಗ್ಗೆ ಮಾದ್ಯಮಗಳಿಗೆ ವಿವರಿಸಿದ ಲಿಂಗತ್ವ ಅಲ್ಪಸಂಖ್ಯಾತೆ ನಿಖಿಲಾ , ಸಿಂಗಲ್ ಸ್ಟಾರ್ ಪೊಲೀಸ್ ಅಧಿಕಾರಿ ರಾತ್ರಿ ತನ್ನನ್ನು ಸೆಕ್ಸ್‌ಗೆ ಆಹ್ವಾನಿಸಿದರು,ಹಣ ಕೊಡುತ್ತೇನೆ ಬಾ ಎಂದು ಹೇಳಿದರು
ಯೂನಿರ್ಫಾಮ್ ಹಾಕಿದ್ದೀರಾ ಅಲ್ವಾ ಅದನ್ನು ಕಳಚಿ ಬನ್ನಿ ಎಂದು ಹೇಳಿದ್ದೆ,ಇದೇ ವಿಚಾರವನ್ನು ನಾನು ಸಭೆಯಲ್ಲಿ ನ್ಯಾಯಾಧೀಶರ ಮುಂದೆ ಹೇಳಿದ್ದೆನೆಂದು ವಿವರಿಸಿದ್ದಾರೆ.
ಈ ಹೇಳಿಕೆ ಬಳಿಕ ನಿನ್ನೆ ಪೊಲೀಸ್ ಅಧಿಕಾರಿಗಳು ಕಮೀಷನರ್ ಕಚೇರಿಗೆ ಕರೆದಿದ್ದರು,ನನ್ನ ಹೇಳಿಕೆಗಳನ್ನು ಪಡೆದು ದೂರು ಕೊಡಿ ಎಂದು ಹೇಳಿದ್ದಾರೆ.ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.