ಮಂಗಳೂರು ; ನಗರಸಭೆಯಲ್ಲಿ ಕಾಂಗ್ರೆಸ್,ಬಿಜೆಪಿ ಮೈತ್ರಿ.ಎಸ್ ಡಿಪಿಐ,ಪಕ್ಷ ಬಿಜೆಪಿಯು ಕಾಂಗ್ರೆಸ್ ಜತೆ ಹೊಂದಾಣಿಕೆ ನಡೆಸುತ್ತಾ ಬಂದಿದೆ.ಎಸ್ ಡಿಪಿಐ ,ಪಕ್ಷೇತರರ ಮತಗಳಿಗೆ ಅವಲಂಬಿತ ಬಿಜೆಪಿ ಮುಂಬರುವ ವಿದಾನಸಭಾ ಚುನಾವಣೆಯಲ್ಲಿ ಉಳ್ಳಾಲದಲ್ಲಿ ಸ್ವಂತ ಬಲದಲ್ಲಿ ಗೆಲ್ಲಲು ಸಾಧ್ಯವೇ ಇಲ್ಲ ಎಂದು ಜೆಡಿಎಸ್ ರಾಜ್ಯ ವಕ್ತಾರ ದಿನಕರ ಉಳ್ಳಾಲ್ ಹೇಳಿದರು.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ಬಲ್ಲಿ ನಡೆದ ಪತ್ರಿಕಾ ಗೋಷ್ಟಿಯನ್ನುದ್ದೇಶಿ ಅವರು ಮಾತನಾಡಿದರು.ಮಂಗಳವಾರ ನಡೆದ ಉಳ್ಳಾಲ ನಗರಸಭೆಯ ವಿಶೇಷ ಸಾಮಾನ್ಯಸಭೆಯ ಬಜೆಟ್ ಮಂಡನೆಯಲ್ಲಿ ಕುಡಿಯುವ ನೀರು,ರಸ್ತೆ,ಚರಂಡಿ,ವಿದ್ಯುತ್ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳಿಗೆ ಯಾವುದೇ ಅನುದಾನ ಮೀಸಲಿಡಲಿಲ್ಲ.ಸಮಾರು 4 ಕೋಟಿಯಷ್ಟು ಗುತ್ತಿಗೆದಾರರಿಗೆ ಹಣವನ್ನು ಬಾಕಿ ಇಟ್ಟು ಸಮರ್ಪಕವಾಗಿ ತೆರಿಗೆ ,ನೀರಿನ ಬಿಲ್ಲನ್ನು ಸಂಗ್ರಹಿಸದೆ ಆಡಳಿತ ರೂಢ ಕಾಂಗ್ರೆಸ್ ಪಕ್ಷದವರು ನಗರಸಭೆಯನ್ನು ಮುಳುಗಿಸಿಬಿಟ್ಟಿದ್ದಾರೆ.ಈ ಬಗ್ಗೆ ಅವರದೇ ಪಕ್ಷದ ಕೆಲ ಕೌನ್ಸಿಲರ್ಗಳೇ ಬಹಿರಂಗವಾಗಿ ಸಾಲು ಸಾಲು ಆರೋಪ ಮಾಡುತ್ತಿದ್ದಾರೆ.
ವಿಶೇಷವೆಂದರೆ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವು ದೇಶವಲ್ಲದೆ,ಎಲ್ಲಾ ರಾಜ್ಯಗಳಲ್ಲೂ ಪರಸ್ಪರ ವಿರೋಧಿಗಳಾಗಿದ್ದಾರೆ.ಆದರೆ ಉಳ್ಳಾಲ ನಗರಸಭೆಯಲ್ಲಿ ಮಾತ್ರ ಬಹುಮತವಿಲ್ಲದ ಕಾಂಗ್ರೆಸ್ ಪಕ್ಷದ ಆಡಳಿತವನ್ನ ಪ್ರತಿಸಲ ವಿರೋಧ ಪಕ್ಷ ಬಿಜೆಪಿ ಬೆಂಬಲಿಸಿ ಕಳೆದ ವರ್ಷ ಹಾಗೂ ಈ ವರ್ಷ ಬಡ ಜನರಿಗೆ ಉಪಯೋಗಕ್ಕೆ ಬಾರದ ಬಜೆಟನ್ನ ಅನುಮೋದಿಸಲು ಸಹಕರಿಸಿದ್ದಾರೆ.ನಾವು ಯಾವುದೇ ರಾಜಕೀಯ ನಡೆಸುತ್ತಿಲ್ಲ ನಮಗೆ ನಗರಸಭೆಯ ದುರಾಡಳಿತದ ವ್ಯವಸ್ಥೆಯನ್ನ ಬದಲಿಸಬೇಕಷ್ಟೆ ಎಂದರು.
ಉಳ್ಳಾಲ ನಗರಸದಸ್ಯ ಖಲೀಲ್ ಮಾತನಾಡಿ ನಗರಸಭೆಯಲ್ಲಿ ಕಳೆದ ಒಂದು ವರುಷದಿಂದ ಬಿಜೆಪಿಯವರ ಬಾಯಲ್ಲಿ ತಟಸ್ಥ ಎಂಬ ಪದ ಮಾರ್ದನಿಸುತ್ತಿದೆ.ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಸಂದರ್ಭದಲ್ಲಿ ಆಡಳಿತರೂಢ ಕಾಂಗ್ರೆಸ್ಗೆ ಬಹುಮತ ಇಲ್ಲದಿದ್ದರೂ ಬಿಜೆಪಿಯವರು ನಾವು ತಟಸ್ಥ ಎಂದರು.ಜಿಲ್ಲಾಧಿಕಾರಿಯಲ್ಲಿ ಈ ಬಗ್ಗೆ ಕೇಳಿದರೆ ತಟಸ್ಥ ಎಂದರೆ ಪರೋಕ್ಷ ಬೆಂಬಲ ಎಂದರ್ಥ ಎಂದು ಹೇಳುತ್ತಾರೆ.ನಿನ್ನೆ ನಡೆದ ಜನವಿರೋಧಿ ಬಜೆಟ್ ಮಂಡನೆಯಲ್ಲೂ ವಿರೋಧ ಪಕ್ಷ ಬಿಜೆಪಿ ಅದೇ ತಟಸ್ಥ ಪದವನ್ನೇ ಪುನರುಚ್ಚರಿಸಿದೆ.ಕಾಂಗ್ರೆಸ್ನ ಭ್ರಷ್ಟಾಚಾರಕ್ಕೆ ತಟಸ್ಥ ಪದದ ಮೂಲಕ ಪರೋಕ್ಷ ಬೆಂಬಲ ನೀಡುತ್ತಿರುವ ಬಿಜೆಪಿಯವರಿಗೆ ಮಾನ ಮರ್ಯಾದಿ ಇಲ್ಲವೇ ಎಂದು ಪ್ರಶ್ನಿಸಿದರು.ನಗರಸಭೆ ಅಧಿಕಾರಿಗಳು ಬಡವರಲ್ಲಿ ಮಾತ್ರ ತೆರಿಗೆ ವಸೂಲು ಮಾಡುತ್ತಿದ್ದಾರೆ,ಉಳ್ಳಾಲದ ಅನೇಕ ಕಾರ್ಖಾನೆಗಳು ,ಕಲ್ಲಾಪಿನ ಗ್ಲೋಬಲ್ ಮಾರ್ಕೆಟ್ ನ ತೆರಿಗೆ ನಗರಸಭೆಗೆ ಸಂದಾಯವಾಗುತ್ತಿಲ್ಲ.ಕಲ್ಲಾಪುವಿನ ಕಣಚೂರು ಫ್ಯಾಕ್ಟರಿ ಹಿಂದಿನ ನಗರಸಭೆಗೆ ಸೇರಿರುವ ಒಂದೂವರೆ ಎಕರೆ ಜಮೀನು ಒತ್ತುವರಿ ಆಗುತ್ತಿದ್ದರೂ ನಗರಾಡಳಿತ ಕಣ್ಣಿಲ್ಲದಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಟಿಯಲ್ಲಿ ಉಳ್ಳಾಲ ನಗರಸದಸ್ಯರಾದ ಅಬ್ದುಲ್ ಜಬ್ಬಾರ್,ಅಬ್ದುಲ್ ಬಶೀರ್ ಉಪಸ್ಥಿತರಿದ್ದರು.