ಮಂಗಳೂರು : ಜಲ್ಲಿಗುಡ್ಡೆ ಎಕ್ಸ್ಪೋ ಕ್ಲಬ್ (ರಿ.) ವತಿಯಿಂದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಎಕ್ಸ್ಪೋ ಕ್ಲಬ್ನ ಮಾಜಿ ಅಧ್ಯಕ್ಷರಾಗಿದ್ದ ದಿವಂಗತ ಪ್ರದೀಪ್ ಕುಮಾರ್ ಅವರ ತಾಯಿ ಕಮಲಾ ಟಿ. ನಾಯರ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ರಾಷ್ಟ್ರಗೀತೆ ಹಾಡಿ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಯೋಧ ಸತೀಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ. ಸೋಜಾ, ಪಡುಬೀಡು ನಾಗಬನದ ಮುಖ್ಯಸ್ಥ ಯಶವಂತ ಶೆಟ್ಟಿ, ದಿನೇಶ್ ಟಿಂಬರ್ ಮಾಲೀಕ ದಿನೇಶ್, ಸಮಾಜ ಕಾರ್ಯಕರ್ತ ಚಂದ್ರಶೇಖರ್, ಮಾಜಿ ರಾಜ್ಯಮಟ್ಟದ ವಾಲಿಬಾಲ್ ಆಟಗಾರ ಸಂಪತ್ ಕುಮಾರ್, ಲಯನ್ ಬಿ. ಪ್ರಕಾಶ್ ಪೈ, ಕದ್ರಿ ಠಾಣೆಯ ಎಎಸ್ಐ ಸುಧಾಕರ್ ಪಾಟೀಲ್, ಅಂಬಾ ಭವಾನಿ ಭಜನಾ ಮಂದಿರದ ಅಧ್ಯಕ್ಷ ಬಾಲಚಂದ್ರ ರಾವ್ ಸಿಂಧ್ಯ, ನಿವೃತ್ತ ಮುಖ್ಯೋಪಾಧ್ಯಾಯಿನಿ ಸುರೇಖಾ, ರಾಕೇಶ್ ರಾವ್, ಮಣಿಕಂಠ, ಯಾದವ್ ಶೆಟ್ಟಿ, ಲೋಕೇಶ್ ಸುವರ್ಣ, ಪ್ರಬಿತ್ ಕುಮಾರ್, ಉದಿತ್ ನಾಯರ್, ದಯಾನಂದ MCF, ಸೀತಾರಾಮ್ ಪೂಜಾರಿ, ಸರಸ್ವತಿ ದೇವೋಜಿ ರಾವ್, ಪ್ರಭಾಕರ್, ಉಸ್ಮಾನ್, ಭಾಸ್ಕರ್ ಶೆಟ್ಟಿ, ವಸಂತ ರಾವ್, ಸುಜಿತ್ ಕುಮಾರ್, ಹರಿಕೇಶವ್ ಜಿ. ಜಾಧವ್, ಮೋಹನ್ ರಾವ್, ದೀಕ್ಷಿತ್, ಬಾಲಕೃಷ್ಣ ಟೈಲರ್, ಕುಶಾಲ, ಬ್ರಿಜೇಶ್, ಸುರೇಶ್ ರಾವ್ ಲಾಡ್, ಸುದೇಶ್ ಸುವರ್ಣ, ಕಮಲಾಕ್ಷ, ಶಂಕರ, ಅಯಾಝ್ ಭಾಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಎಕ್ಸ್ಪೋ ಕ್ಲಬ್ನ ಕೋಶಾಧಿಕಾರಿ ಆಲ್ವಿನ್ ಪಿರೇರಾ, ಉಪಾಧ್ಯಕ್ಷ ಪ್ರೀತೇಶ್, ಗೌರವಾಧ್ಯಕ್ಷ ಇಝ್ಜಾ ಬಜಾಲ್ ಹಾಗೂ ಅಧ್ಯಕ್ಷ ಜ್ಯೋತಿಶ್ ಕುಮಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಲೋಕೇಶ್ ಪಿ. ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಸಿಹಿತಿಂಡಿ ವಿತರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಮುಕ್ತಾಯಗೊಳಿಸಲಾಯಿತು.

