Friday, March 28, 2025
Flats for sale
Homeಜಿಲ್ಲೆಮಂಗಳೂರು ; ಉಳ್ಳಾಲ ನಗರಸಭೆ ಬಜೆಟ್ ;ಕಿವಿಗೆ ಹೂವಿಟ್ಟು ಆಡಳಿತ ಕಾಂಗ್ರೆಸನ್ನ ಅಣಕಿಸಿದ ಜೆಡಿಎಸ್.ಸದಸ್ಯರ ನಡುವೆ...

ಮಂಗಳೂರು ; ಉಳ್ಳಾಲ ನಗರಸಭೆ ಬಜೆಟ್ ;ಕಿವಿಗೆ ಹೂವಿಟ್ಟು ಆಡಳಿತ ಕಾಂಗ್ರೆಸನ್ನ ಅಣಕಿಸಿದ ಜೆಡಿಎಸ್.ಸದಸ್ಯರ ನಡುವೆ ನೂಕಾಟ ತಳ್ಳಾಟ.

ಉಳ್ಳಾಲ: ಉಳ್ಳಾಲ ನಗರಸಭೆಯ 2023-24 ನೇ ಸಾಲಿನ ಬಜೆಟ್ ಇಂದು ಮಂಡನೆಯಾಗಿದ್ದು ಬಜೆಟನ್ನ ವಿರೋಧಿಸಿದ ಜೆಡಿಎಸ್ ಕೌನ್ಸಿಲರ್ ಗಳು ಕಿವಿಗೆ ಹೂವಿಟ್ಟು ಆಡಳಿತರೂಢ ಕಾಂಗ್ರೆಸನ್ನು ಅಣಕಿಸಿದ್ದಾರೆ.

ಕಳೆದ ರಾಜ್ಯ ಬಜೆಟ್ ಮಂಡನೆ ವೇಳೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಅವರು ಸದನದಲ್ಲಿ ಕಿವಿಗೆ ಹೂ ಇಟ್ಟು ಬಿಜೆಪಿ ಸರಕಾರವನ್ನ ಅಣಕಿಸಿ ಗಮನ ಸೆಳೆದಿದ್ದರು.ಕಾಂಗ್ರೆಸ್ನ ಅಸ್ತ್ರವನ್ನೇ ಇದೀಗ ಜೆಡಿಎಸ್ ನ ಉಳ್ಳಾಲ ನಗರಸದಸ್ಯರು ಬಳಸಿ ಆಡಳಿತರೂಢ ಕಾಂಗ್ರೆಸನ್ನ ಅಣಕಿಸಿದ್ದಾರೆ.

ಇಂದು ಉಳ್ಳಾಲ ನಗರಸಭೆ ಆಡಳಿತ ಸೌಧದಲ್ಲಿ ಬಜೆಟ್ ಮಂಡನೆ ವೇಳೆ ಜೆಡಿಎಸ್ ನ ಸದಸ್ಯರಾದ ದಿನಕರ ಉಳ್ಳಾಲ್, ಅಬ್ದುಲ್ ಬಶೀರ್ ,ಖಲೀಲ್,ಜಬ್ಬಾರ್ ,ಮುಶ್ತಾಕ್ ಪಟ್ಲ ಅವರು ಕಿವಿಗೆ ಹೂವಿಟ್ಟು ಬಜೆಟ್ಗೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದಾರೆ.

ಈ ವೇಳೆ ಬಿಜೆಪಿ ನಾಮ ನಿರ್ದೇಶಿತ ಸದಸ್ಯ ಬಾಬು ಬಂಗೇರ ಮಾತನಾಡಿ ಕಾಂಗ್ರೆಸ್ ಬಜೆಟ್ಗೆ ಬೆಂಬಲ ಸೂಚಿಸಿದರೆ,ಜೆಡಿಎಸ್ ನವರು ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.ನಾವು ಬಜೆಟ್ ವಿಚಾರದಲ್ಲಿ ತಟಸ್ಥ ಎಂದಾಕ್ಷಣ ಸಭೆಯ ವೇದಿಕೆಯಲ್ಲಿದ್ದ ನಗರಸಭೆ ಉಪಾಧ್ಯಕ್ಷ ಆಯುಬ್ ಮಂಚಿಲ ಟೇಬಲನ್ನ ಬಡಿದು ಬೆಂಬಲ ಸೂಚಿಸಿದ್ದಾರೆ.ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಹಿರಿಯ ಸದಸ್ಯ ದಿನಕರ್ ಉಳ್ಳಾಲ್ ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತ ಪಕ್ಷ ಕಾಂಗ್ರೆಸ್ ಹೊಂದಾಣಿಕೆಯ ರಾಜಕೀಯ ನಡೆಸುತ್ತಿದ್ದು ನೀವಿಬ್ಬರು ಒಂದೇ ನಾಣ್ಯದ ಎರಡು ಮುಖಗಳೆಂದು ಆಕ್ಷೇಪಿಸಿದ್ದಾರೆ.ಮತ್ತೆ ಸದನದಲ್ಲಿ ಆಡಳಿತ ವಿರೋಧ ಪಕ್ಷಗಳ ನಡುವೆ ಗದ್ದಲ ಎಬ್ಬಿದ್ದು ಸಭಾದ್ಯಕ್ಷತೆ ವಹಿಸಿದ್ದ ನಗರ ಸಭೆ ಅಧ್ಯಕ್ಷೆ ಚಿತ್ರಕಲಾ ಅವರು ಗದ್ದಲ ,ಗಲಾಟೆಯ ಮಧ್ಯೆಯೇ ರಾಷ್ಟ್ರಗೀತೆ ಹಾಡುವುದರೊಂದಿಗೆ ಸಭೆಯನ್ನ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ.

ಎಸ್ ಡಿಪಿಐ ಸದಸ್ಯರಾದ ಅಝ್ಗರ್ ಆಲಿ ನಗರಸಭೆ ಪ್ರಬಂದಕರಲ್ಲಿ ಅಜೆಂಡದಲ್ಲಿ ಸಭೆ ಸಂಪೂರ್ಣಗೊಂಡಿಲ್ಲವೆಂದು ದಾಖಲಿಸಲು ಸೂಚಿಸಿದ್ದಾರೆ.ಈ ವೇಳೆ ಮಧ್ಯೆ ಪ್ರವೇಶಿಸಿದ ಕಾಂಗ್ರೆಸ್ ನಗರ ಸದಸ್ಯರಾದ ಭಾರತಿ ಮತ್ತು ವೀಣಾ ಶಾಂತಿ ಡಿ‌ ಸೋಜ ಪ್ರಬಂದಕರಲ್ಲಿ ಅಝ್ಗರ್ ವಿರುದ್ಧ ಪೊಲೀಸ್ ದೂರು ನೀಡುವಂತೆ ಹೇಳಿದ್ದು ಇದರಿಂದ ಕೆರಳಿದ ಅಝ್ಗರ್ ಕೈ ಸದಸ್ಯೆಯರ ವಿರುದ್ಧ ಗಲಾಟೆ ನಡೆಸಿದ್ದು ಮಾತಿನ ಚಕಮಕಿ ತಳ್ಳಾಟ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular