Wednesday, August 12, 2026
Homeಜಿಲ್ಲೆಮಂಗಳೂರು : ಉಳಾಯಿಬೆಟ್ಟು ಪರ್ಯಾಯ ರಸ್ತೆ ಕೆಸರುಗದ್ದೆ – ಪೊಲೀಸ್ ವಾಹನ, ಸ್ಥಳೀಯರ ಸಿಲುಕಿ ಸಾರ್ವಜನಿಕರ...

ಮಂಗಳೂರು : ಉಳಾಯಿಬೆಟ್ಟು ಪರ್ಯಾಯ ರಸ್ತೆ ಕೆಸರುಗದ್ದೆ – ಪೊಲೀಸ್ ವಾಹನ, ಸ್ಥಳೀಯರ ಸಿಲುಕಿ ಸಾರ್ವಜನಿಕರ ಪರದಾಟ.

ಮಂಗಳೂರು : ಉಳಾಯಿಬೆಟ್ಟು ಸಮೀಪ ನಡೆಯುತ್ತಿರುವ ಸೇತುವೆ ಕಾಮಗಾರಿಯಿಂದಾಗಿ ವಾಹನ ಸಂಚಾರಕ್ಕಾಗಿ ನಿರ್ಮಿಸಲಾಗಿರುವ ಪರ್ಯಾಯ ರಸ್ತೆ ಮಳೆಯ ಪರಿಣಾಮ ಸಂಪೂರ್ಣ ಕೆಸರಿನಿಂದ ಆವರಿಸಿದೆ.

ನಿರಂತರ ಮಳೆಯಿಂದ ರಸ್ತೆ ಮಣ್ಣುಗದ್ದೆಯಾಗಿ ಮಾರ್ಪಟ್ಟಿದ್ದು, ಹಲವು ವಾಹನಗಳು ಕೆಸರಿನಲ್ಲಿ ಹೂತು ಜಾಮ್ ಉಂಟಾಗುತ್ತಿದೆ. ಇದರಿಂದ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಇದೇ ಮಾರ್ಗವನ್ನು ಬಳಸುವ ಶಾಲಾ ಮಕ್ಕಳು, ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಪ್ರತಿದಿನ ಪರದಾಡುವಂತಾಗಿದ್ದು, ಸುರಕ್ಷಿತ ಸಂಚಾರಕ್ಕೂ ಅಡ್ಡಿಯಾಗಿದೆ. ತಕ್ಷಣ ರಸ್ತೆ ದುರಸ್ತಿಪಡಿಸಿ ಸಂಚಾರಕ್ಕೆ ಯೋಗ್ಯವಾಗುವಂತೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular