ಮಂಗಳೂರು : ರೋಹನ್ ಕಾರ್ಪೊರೇಷನ್ ವತಿಯಿಂದ ಅಡ್ಯಾರ್ ಗಾರ್ಡನ್‌ನಲ್ಲಿ ಆಯೋಜಿಸಲಾದ “An Evening with Shah Rukh Khan” ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು.




ಬಾಲಿವುಡ್ ನಟ ಶಾರುಖ್ ಖಾನ್ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದು, ನಗರದ ಗಣ್ಯರು, ಉದ್ಯಮಿಗಳು, ವಿಐಪಿಗಳು ಹಾಗೂ ಆಹ್ವಾನಿತ ಅತಿಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಪ್ರದರ್ಶನಗಳು, ಇಂಡಿಯನ್ ಐಡಲ್ ಖ್ಯಾತಿಯ ಸಲ್ಮಾನ್ ಅಲಿ ಅವರ ಸಂಗೀತ ಕಾರ್ಯಕ್ರಮ ಹಾಗೂ ರೋಹನ್ ಮರೀನಾ ಒನ್ ಯೋಜನೆಯ ಮರು ಅನಾವರಣ ಪ್ರಮುಖ ಆಕರ್ಷಣೆಯಾಗಿತ್ತು.
ಶಾರುಖ್ ಖಾನ್ ಅವರು ಡಾ. ರೋಹನ್ ಮೊಂಟೇರೊ ಮತ್ತು ಡಿಯಾನ್ ಮೊಂಟೇರೊ ಅವರೊಂದಿಗೆ ಸಂವಾದ ನಡೆಸಿ, ಕನಸು ಕಾಣುವ ಧೈರ್ಯ, ಪರಿಶ್ರಮ ಮತ್ತು ಯಶಸ್ಸಿನ ಕುರಿತು ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡರು.
ಮಂಗಳೂರಿನ ಜನರು ಹಾಗೂ ಸಂಸ್ಕೃತಿಯನ್ನು ಶ್ಲಾಘಿಸಿದ ಅವರು, ಯುವಜನತೆಗೆ ದೊಡ್ಡ ಕನಸು ಕಾಣುವಂತೆ ಕರೆ ನೀಡಿದರು. ಸಂಭ್ರಮ, ಮನರಂಜನೆ ಮತ್ತು ಪ್ರೇರಣೆಯ ಸಂಗಮವಾಗಿದ್ದ ಈ ಕಾರ್ಯಕ್ರಮ ಮಂಗಳೂರಿನ ಕಾರ್ಪೊರೇಟ್ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿ ಗುರುತಿಸಿಕೊಂಡಿತು.



