Tuesday, August 11, 2026
Homeಜಿಲ್ಲೆಕಡಬ : ಏಕಾಏಕಿ ಸ್ಫೋಟಗೊಂಡ ಫ್ರಿಡ್ಜ್ ; ಮನೆಗೆ ಭಾರೀ ಹಾನಿ,ತಪ್ಪಿದ ಭಾರೀ ಅನಾಹುತ!

ಕಡಬ : ಏಕಾಏಕಿ ಸ್ಫೋಟಗೊಂಡ ಫ್ರಿಡ್ಜ್ ; ಮನೆಗೆ ಭಾರೀ ಹಾನಿ,ತಪ್ಪಿದ ಭಾರೀ ಅನಾಹುತ!

ಕಡಬ : ತಾಲೂಕಿನ ರಾಮಕುಂಜ ಗ್ರಾಮದ ಆತೂರಿನಲ್ಲಿ ಫ್ರಿಡ್ಜ್ ಸ್ಫೋಟಗೊಂಡು ಮನೆಯೊಂದಕ್ಕೆ ಹಾನಿಯಾದ ಘಟನೆ ಆ.11ರಂದು ಸಂಜೆ ನಡೆದಿದೆ.

ಆತೂರು ನಿವಾಸಿ ಹಾಗೂ ವಿದೇಶದಲ್ಲಿ ಉದ್ಯೋಗದಲ್ಲಿರುವ ಸಿದ್ದೀಕ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ಫ್ರಿಡ್ಜ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಮನೆಯೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಮನೆಯ ವಿವಿಧ ಭಾಗಗಳಿಗೆ ಹಾನಿಯಾಗಿದೆ.

ಘಟನೆಯಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿರುವುದಾಗಿ ತಿಳಿದುಬಂದಿದೆ. ಘಟನೆ ವೇಳೆ ಮನೆಯಲ್ಲಿ ಸಿದ್ದೀಕ್ ಅವರ ಪತ್ನಿ ಆರೀಫಾ ಮಾತ್ರ ಇದ್ದರು. ಅದೃಷ್ಟವಶಾತ್ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಬೆಂಕಿ ಕಾಣಿಸಿಕೊಂಡ ಕೂಡಲೇ ಸ್ಥಳೀಯ ಯುವಕರು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ಸಹಕರಿಸಿದರು. ಅಝೀಝ್ ಹಳ್ಯಾರ, ಅಝೀಝ್ ಪಲ್ತಾಡಿ, ಸಿಹಾಬ್ ಗೋಳಿತ್ತಾಡಿ, ಲತೀಫ್ ನೆಲ್ಯಾಟ್ಟು, ಅನ್ಸಾರ್ ಕುಟೇಲ್ ನೀರಾಜೆ, ಜನಾರ್ದನ ರಾಮಕುಂಜ, ಅಶ್ರಫ್ ಪಟ್ಟೆ, ಖಾದರ್ ಬಿಜತಲಿ, ಫಾರೂಕ್ ಎಲ್ಯಂಗ, ಶಂಶಿರ್ ಗೋಳಿತ್ತಾಡಿ, ಫಾರೂಕ್ ಅಮೈ, ನಿಝರ್ ಮೊಟ್ಟೆತಡ್ಕ ಹಾಗೂ ರಝಕ್ ಬೂಮಿಕ ಸೇರಿದಂತೆ ಹಲವರು ಬೆಂಕಿ ನಂದಿಸಲು ನೆರವಾದರು. ಫ್ರಿಡ್ಜ್ ಸ್ಫೋಟಕ್ಕೆ ನಿಖರ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular