Monday, May 25, 2026
Flats for sale
Homeಜಿಲ್ಲೆಮಂಗಳೂರು : “ಇವಿನಿಂಗ್ ಆಫ್ ಗ್ರ್ಯಾಟಿಟ್ಯೂಡ್ 2026” : ವೆನ್‌ಲಾಕ್ ಆಸ್ಪತ್ರೆಗೆ ಆರೋಗ್ಯ ಸೇವಾ ನೆರವು...

ಮಂಗಳೂರು : “ಇವಿನಿಂಗ್ ಆಫ್ ಗ್ರ್ಯಾಟಿಟ್ಯೂಡ್ 2026” : ವೆನ್‌ಲಾಕ್ ಆಸ್ಪತ್ರೆಗೆ ಆರೋಗ್ಯ ಸೇವಾ ನೆರವು ನೀಡಿದ ರೋಹನ್ ಕಾರ್ಪೊರೇಷನ್.

ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಷನ್ ವತಿಯಿಂದ ಶನಿವಾರ ನಗರದ ದಿ ಓಷನ್ ಪರ್ಲ್‌ನಲ್ಲಿ “ಇವಿನಿಂಗ್ ಆಫ್ ಗ್ರ್ಯಾಟಿಟ್ಯೂಡ್ 2026” ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಶ್ರೀ ಐವಾನ್ ಡಿಸೋಜಾ,ಮಂಗಳೂರಿನ ಸರ್ಕಾರಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಅಧೀಕ್ಷಕರು.ಡಾ. ಡಿ.ಎಸ್. ಶಿವಪ್ರಕಾಶ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ರೋಹನ್ ಮೊಂತೇರೊ ಹಾಗೂ ನಿರ್ದೇಶಕರಾದ ಶ್ರೀ ಡಿಯೋನ್ ಮೊಂತೇರೊ ಭಾಗವಹಿಸಿದ್ದರು.

ಈ ವೇಳೆ ವೆನ್‌ಲಾಕ್ ಆಸ್ಪತ್ರೆಗೆ ವೈದ್ಯಕೀಯ ನೆರವುಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಯೋಜನೆಯಡಿ ರೋಹನ್ ಕಾರ್ಪೊರೇಷನ್ ಮಂಗಳೂರಿನ ವೆನ್‌ಲಾಕ್ ಜಿಲ್ಲಾ ಆಸ್ಪತ್ರೆಗೆ ಮಲ್ಟಿ ಪ್ಯಾರಾ ಮಾನಿಟರ್‌ಗಳು ಹಾಗೂ ನೇತ್ರ ಚಿಕಿತ್ಸೆಗೆ ಅಗತ್ಯವಾದ ಆಫ್ತಾಲ್ಮಿಕ್ ಹೊರರೋಗಿ ವಿಭಾಗ ಘಟಕವನ್ನು ಹಸ್ತಾಂತರಿಸಿತು.

“ಮಂಗಳೂರು ಅಭಿವೃದ್ಧಿಯ ನಗರ” ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಐವಾನ್ ಡಿಸೋಜಾ, “ಒಮ್ಮೆ ಶಾಂತ ಕರಾವಳಿ ನಗರವಾಗಿದ್ದ ಮಂಗಳೂರು ಇಂದು ಅವಕಾಶಗಳ ಹಾಗೂ ಅಭಿವೃದ್ಧಿಯ ನಗರವಾಗಿ ರೂಪುಗೊಳ್ಳುತ್ತಿದೆ. ಈ ಬದಲಾವಣೆಯಲ್ಲಿ ರೋಹನ್ ಕಾರ್ಪೊರೇಷನ್‌ನಂತಹ ಸಂಸ್ಥೆಗಳ ಪಾತ್ರ ಶ್ಲಾಘನೀಯ,” ಎಂದು ಹೇಳಿದರು.

ಐಟಿ ಮತ್ತು GCC ಹಬ್ ಆಗುವತ್ತ ಮಂಗಳೂರು ಸಂಸ್ಥೆಯ ನಿರ್ದೇಶಕರಾದ ಶ್ರೀ ಡಿಯೋನ್ ಮೊಂತೇರೊ ಮಾತನಾಡಿ, ಐಟಿ ಕಂಪನಿಗಳು, ಜಾಗತಿಕ ಸಾಮರ್ಥ್ಯ ಕೇಂದ್ರಗಳು (GCC) ಹಾಗೂ ಜಾಗತಿಕ ಕೇಂದ್ರ ಕಚೇರಿಗಳನ್ನು ಮಂಗಳೂರಿಗೆ ಕರೆತಂದು ನಗರವನ್ನು ಪ್ರಮುಖ ಹೂಡಿಕೆ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.

“ಸಮಾಜ ಸೇವೆಗೆ ಬದ್ಧ” ವ್ಯವಸ್ಥಾಪಕ ನಿರ್ದೇಶಕರಾದ ಡಾ. ರೋಹನ್ ಮೊಂತೇರೊ ಮಾತನಾಡಿ, “ಮುಂದಿನ ದಿನಗಳಲ್ಲಿ ಇನ್ನಷ್ಟು CSR ಯೋಜನೆಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮಂಗಳೂರಿನ ಅಭಿವೃದ್ಧಿಗೆ ಕೈಜೋಡಿಸುತ್ತೇವೆ,” ಎಂದರು.

ತಜ್ಞರಿಂದ ರಿಯಲ್ ಎಸ್ಟೇಟ್ ಸಂವಾದ “ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಂಗಳೂರಿನ ಬೆಳೆಯುತ್ತಿರುವ ಸ್ಥಾನ” ಎಂಬ ವಿಷಯದ ಕುರಿತು ವಿಶೇಷ ಸಂವಾದ ಗೋಷ್ಠಿ ನಡೆಯಿತು. ಉದ್ಯಮ ತಜ್ಞರಾದ ಅಂಕುಶ್ ಸಯಲ್, ದೀಪ್ತಿ ಮಲಿಕ್, ಹೇಮ್ ಬಾತ್ರಾ ಹಾಗೂ ನವದೀಪ್ ಸಿಂಗ್ ಖನುಜಾ ಭಾಗವಹಿಸಿ ಮಂಗಳೂರಿನ ಭವಿಷ್ಯದ ಬೆಳವಣಿಗೆ ಕುರಿತು ಅಭಿಪ್ರಾಯ ಹಂಚಿಕೊಂಡರು.

RELATED ARTICLES

LEAVE A REPLY

Please enter your comment!
Please enter your name here

Most Popular