Thursday, July 23, 2026
Homeರಾಜ್ಯಬೆಳಗಾವಿ : ಒಂದೇ ದಿನ ಮೂವರ ಮೇಲೆ ನರಿ ದಾಳಿ ; ಓರ್ವ ರೈತನಿಗೆ ಗಂಭೀರ...

ಬೆಳಗಾವಿ : ಒಂದೇ ದಿನ ಮೂವರ ಮೇಲೆ ನರಿ ದಾಳಿ ; ಓರ್ವ ರೈತನಿಗೆ ಗಂಭೀರ ಗಾಯ..!

ಬೆಳಗಾವಿ : ಒಂದೇ ದಿನ ಮೂವರ ಮೇಲೆ ನರಿ ದಾಳಿ ನಡೆಸಿ ಓರ್ವ ರೈತನಿಗೆ ಗಂಭೀರ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ.

ಸಾವಳಗಿ ಗ್ರಾಮದ ಗುರುಪುತ್ರ ಪರವಾಣಿ(69) ಗಂಭೀರ ಗಾಯಗೊಂಡಿದ್ದು ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ .ಕುತ್ತಿಗೆ, ಕಿವಿ ಹಣೆ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗೊಂಡಿದೆ. ಜಮೀನಿನಲ್ಲಿ ಕೃಷಿ ಕೆಲಸ ಮಾಡುವಾಗ ಏಕಾಏಕಿ ನರಿ ದಾಳಿ ಮಾಡಿದ್ದು ನರಿ ದಾಳಿಯಿಂದ ಗುರಪುತ್ರ ಪರವಾಣಿ ಎಂಬುವವರ ಸ್ಥಿತಿ ಚಿಂತಾಜನಕವಾಗಿದೆ .

ಗೋಕಾಕ ಸರ್ಕಾರಿ ‌ಆಸ್ಪತ್ರೆಯಲ್ಲಿ ನರಿ ದಾಳಿಗೆ ಕೊಡಬೇಕಿದ್ದ ವ್ಯಾಕ್ಸಿನ ಖಾಲಿ ಆಗಿದ್ದು ಗೋಕಾಕನಲ್ಲಿ ಸೂಕ್ತ ಚಿಕಿತ್ಸೆ ಸಿಗದ ಹಿನ್ನೆಲೆ ಬೆಳಗಾವಿ ಬೀಮ್ಸ್ ‌ನಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಆದಷ್ಟು ಬೇಗೆ ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ನರಿಯನ್ನ ಸೆರೆಹಿಡಿದು ಕಾಡಿಗೆ ಬಿಡಬೇಕೆಂದು ಕುಟುಂಬಸ್ಥರ ಆಗ್ರಹಿಸಿದ್ದಾರೆ.ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಈ ಘಟನೆ ನಡೆದಿದ್ದು ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ದೌಡಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular