Tuesday, July 21, 2026
Homeದೇಶಬೆಂಗಳೂರು : ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆಂದ ರೀಲ್ಸ್ ರಾಣಿ ಸುಗಂಧಾ ಶರ್ಮಾ,ಕೆಲಸದಿಂದ...

ಬೆಂಗಳೂರು : ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆಂದ ರೀಲ್ಸ್ ರಾಣಿ ಸುಗಂಧಾ ಶರ್ಮಾ,ಕೆಲಸದಿಂದ ವಜಾ ..!

ಬೆಂಗಳೂರು : ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಇನ್‌ಸ್ಟಾ ರೀಲ್ಸ್ ಮೂಲಕ ದುರಹಂಕಾರ ಪ್ರದರ್ಶಿಸಿದ ಉತ್ತರ ಭಾರತ ಮೂಲದ ರೀಲ್ಸ್ ರಾಣಿ ಸುಗಂಧಾ ಶರ್ಮಾಗೆ ಇದೀಗ ಕನ್ನಡಿಗರ ತಾಕತ್ತು ಅರ್ಥವಾಗಿದೆ. ಆಕೆ ಮಾಡುವ ಕಂಪನಿಯೇ ನಡತೆಡಯನ್ನು ಗಮನಿಸಿ ಕೆಲಸದಿಂದ ಕಿತ್ತು ಹಾಕಿದೆ.

ಇನ್‌ಸ್ಟಾಗ್ರಾಮ್ ಮಹಿಳೆಯೊಬ್ಬಳು ಉತ್ತರ ಭಾರತೀಯರು ಬೆಂಗಳೂರು ಬಿಟ್ಟರೆ ನಗರ ಖಾಲಿಯಾಗುತ್ತದೆ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದರು. ಮಹಿಳೆ ಸುಗಂಧ್ ಶರ್ಮಾ ಅವರು “ಬೆಂಗಳೂರು ಸಬ್ಕಾ ಹೈ ಕಿಸಿ ಏಕ್ ಕಾ ನಹೀಂ (ಬೆಂಗಳೂರು ಎಲ್ಲರಿಗೂ ಸೇರಿದ್ದು, ಯಾರಿಗೂ ಅಲ್ಲ)” ಎಂಬ ಶೀರ್ಷಿಕೆಯೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ ಅನ್ನು ಪೋಸ್ಟ್ ಮಾಡಿದ್ದಾರೆ. ಉತ್ತರ ಭಾರತೀಯರು ಬೆಂಗಳೂರು ಬಿಟ್ಟರೆ ಬೆಂಗಳೂರಿನ ಕೋರಮಂಗಲದಲ್ಲಿರುವ ಪೇಯಿಂಗ್ ಗೆಸ್ಟ್‌ಗಳು ಮತ್ತು ಕ್ಲಬ್‌ಗಳು ಖಾಲಿಯಾಗುತ್ತವೆ ಎಂದು ವಿಡಿಯೋದಲ್ಲಿ ಹೇಳಿದ್ದಳು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೇ ಕನ್ನಡಿಗರು ಶರ್ಮಾಗೆ ಬೆಂಗಳೂರನ್ನು ತೊರೆಯುವಂತೆ ಓಪನ್ ಆಗಿಯೇ ಚಾಲೆಂಜ್ ಹಾಕಿದ್ದರು. ಆದರೆ ಅವರ ಚಾಲೆಂಜ್ ಪರಿಣಾಮದಿಂದ ಸ್ವತಃ ಅವರೇ ಕೆಲಸ ಕಳೆದುಕೊಳ್ಳುವಂತಾಗಿದೆ.

ಈಕೆಯ ವೀಡಿಯೋ ನೋಡಿ ಕೆರಳಿದ್ದ ಕನ್ನಡ ಸಂಘಟನೆಯ ರೂಪೇಶ್ ರಾಜಣ್ಣ ಯುವತಿ ಕೆಲಸ ಮಾಡುವ ಕಂಪನಿಗೆ ಹೋಗಿ ವಿಚಾರಿಸಿದ್ದಾರೆ. ಈ ವೇಳೆ ಕಂಪನಿಯೇ ಕೆಲಸದಿಂದ ತೆಗೆದು ಹಾಕಿರೋದು ಬಯಲಿಗೆ ಬಂದಿದೆ. ಸದ್ಯ ಮತ್ತೊಂದು ಖಾಸಗಿ ಕಂಪನಿಯಲ್ಲಿ ಆಕೆ ಕೆಲಸ ಮಾಡುತ್ತಿದ್ದಾರೆ ಅನ್ನೋ ವಿಷ್ಯ ಗೊತ್ತಾಗಿದೆ. ಆ ಕಂಪನಿಗೂ ಭೇಟಿ ನೀಡಿ ಕೆಲಸದಿಂದ ತೆಗದುಹಾಕುವಂತೆ ಮನವಿ ಮಾಡಲಿದ್ದೇವೆ ಎಂದು ಕನ್ನಡ ಹೋರಾಟಗಾರ ರೂಪೇಶ್ ರಾಜಣ್ಣ ಎಚ್ಚರಿಸಿದ್ದಾರೆ.ಒಟ್ಟಿನಲ್ಲಿ ಪರಊರಿಂದ ಈ ಊರಿಗೆ ಬಂದು ಕೆಲಸ ಮಾಡುವುದು ಬಿಟ್ಟು ಇನ್ನಿಲದ ಅಧಿಕ ಪ್ರಸಂಗ ಮಾಡಿದರೆ ಇದೆ ಪರಿಸ್ಥಿತಿ ಎಂದು ಕೆಲವರು ಜಾಲತಾಣದಲ್ಲಿ ಆಕ್ರೋಶಹೊರಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular