Monday, August 17, 2026
Homeರಾಜ್ಯಬೆಂಗಳೂರು ; SSLC ಫಲಿತಾಂಶ ಪ್ರಕಟ,ಶೇ 94.1% ವಿಧ್ಯಾರ್ಥಿಗಳು ತೇರ್ಗಡೆ,ಈ ಬಾರಿಯೂ ವಿಧ್ಯಾರ್ಧಿನಿಯರದ್ದೇ ಮೆಲುಗೈ,ದ.ಕ ಪ್ರಥಮ,ಕಲಬುರಗಿಗೆ...

ಬೆಂಗಳೂರು ; SSLC ಫಲಿತಾಂಶ ಪ್ರಕಟ,ಶೇ 94.1% ವಿಧ್ಯಾರ್ಥಿಗಳು ತೇರ್ಗಡೆ,ಈ ಬಾರಿಯೂ ವಿಧ್ಯಾರ್ಧಿನಿಯರದ್ದೇ ಮೆಲುಗೈ,ದ.ಕ ಪ್ರಥಮ,ಕಲಬುರಗಿಗೆ ಕೊನೆಯ ಸ್ಥಾನ.

ಬೆಂಗಳೂರು : 2025-26ನೇ ಸಾಲಿನ SSLC ಪರೀಕ್ಷೆ ಫಲಿತಾಂಶ (Karnataka SSLC 10th Result 2026) ಏಪ್ರಿಲ್‌ 23ರ ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಕಟಗೊಂಡಿದೆ. ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಿಸಲ್ಟ್​​ ಸಂಬಂಧಿತ ಮಾಹಿತಿ ನೀಡಿದ್ದಾರೆ. ಪರೀಕ್ಷೆ ಬರೆದಿದ್ದ 7,70,209 ಮಕ್ಕಳ ಪೈಕಿ 7,24,794 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಆ ಮೂಲಕ ಎಸ್​​ಎಸ್​​ಎಲ್​​ಸಿಯಲ್ಲಿ ಶೇ.94.1 ಮಂದಿ ಪಾಸ್​​ ಆಗಿದ್ದಾರೆ. ಮಾರ್ಚ್ 18ರಿಂದ ಏಪ್ರಿಲ್ 2ರವರೆಗೂ ಒಟ್ಟು 2,870 ಪರೀಕ್ಷಾ ಕೇಂದ್ರಗಳಲ್ಲಿ SSLC ಪರೀಕ್ಷೆ ನಡೆದಿತ್ತು.

ದಕ್ಷಿಣ ಕನ್ನಡ ಫಸ್ಟ್​​, ಕಲಬುರಗಿ ಲಾಸ್ಟ್​​
ಈ ಬಾರಿಯ ಎಸ್​​ಎಸ್​​ಎಲ್​​ಸಿ ಪರೀಕ್ಷೆಯಲ್ಲಿ ಶೇ. 98.40 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಶೇ. 98.18 ಫಲಿತಾಂಶ ಪಡೆದ ಉಡುಪಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಶೇ.85.06 ಫಲಿತಾಂಶದೊಂದಿಗೆ ಕಲಬುರಗಿಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಜಿಲ್ಲಾವಾರು ಫಲಿತಾಂಶ
ದಕ್ಷಿಣ ಕನ್ನಡ ಜಿಲ್ಲೆ- 98.40%
ಉಡುಪಿ – 98.18%
ಉತ್ತರ ಕನ್ನಡ- 98.09%
ಹಾಸನ- 97.51%
ಮಂಡ್ಯ- 97.45%
ಶಿರಸಿ- 97.21%
ಹಾವೇರಿ- 96.87%
ಕೊಡಗು- 96.70%
ಶಿವಮೊಗ್ಗ- 96.56%
ವಿಜಯನಗರ- 96.39%
ಬೆಂಗಳೂರು ಗ್ರಾಮಾಂತರ – 95.84%
ಧಾರವಾಡ – 95.59%
ಕೋಲಾರ- 95.50%
ಬಾಗಲಕೋಟೆ- 95.42%
ಬೆಂಗಳೂರು ಉತ್ತರ- 95.34%
ಗದಗ- 95.24%
ಚಿಕ್ಕಮಗಳೂರು- 94.99%
ಬೆಳಗಾವಿ – 94.75%
ದಾವಣಗೆರೆ- 94.64%
ಮೈಸೂರು- 94.50%
ರಾಯಚೂರು- 94.41%
ವಿಜಯಪುರ- 94.17%
ಚಿಕ್ಕೋಡಿ- 94.09%
ಬಳ್ಳಾರಿ- 93.36%
ಕೊಪ್ಪಳ- 93.10%
ರಾಮನಗರ- 92.83%
ಚಿತ್ರದುರ್ಗ- 92.25%
ಬೀದರ್- 92.18%
ತುಮಕೂರು- 92.04%
ಚಾಮರಾಜನಗರ- 91.89%
ಯಾದಗಿರಿ- 91.89%
(ಮಾಹಿತಿ ಅಪ್ಡೇಟ್​​ ಆಗುತ್ತಿದೆ)

RELATED ARTICLES

LEAVE A REPLY

Please enter your comment!
Please enter your name here

Most Popular