Thursday, March 27, 2025
Flats for sale
Homeಕ್ರೈಂಪುತ್ತೂರು : ಸಹೋದರರ ಕಲಹ ಕೊಲೆಯಲ್ಲಿ ಅಂತ್ಯ. ಮಹಾದೇವನನ್ನು ಕೊಂದು ಓಡಿ ಹೋದ ನಿಂಗಪ್ಪನನ್ನು ಹಿಡಿದ...

ಪುತ್ತೂರು : ಸಹೋದರರ ಕಲಹ ಕೊಲೆಯಲ್ಲಿ ಅಂತ್ಯ. ಮಹಾದೇವನನ್ನು ಕೊಂದು ಓಡಿ ಹೋದ ನಿಂಗಪ್ಪನನ್ನು ಹಿಡಿದ ಪೊಲೀಸರು.

ಪುತ್ತೂರು : ಸಹೋದರರ ನಡುವೆ ಕ್ಷುಲಕ ಕಾರಣಕ್ಕೆ ನಡೆದ ಜಗಳ ಕೊಲೆಯಲ್ಲಿ ಪರ್ಯವಸನಗೊಂಡಿದ್ದು, ಇದೀಗ ಕೊಲ ಆರೋಪಿಯನ್ನು ಪೊಲೀಸರು ಹಾವೇರಿ ಜಿಲ್ಲೆಯ ಕನಕಾಪುರದಲ್ಲಿ ಬಂಧಿಸಿದ್ದಾರೆ.

ಪುತ್ತೂರಿ‌ನ ಕೆಮ್ಮಿಂಜ ಗ್ರಾಮದ ಮುಕ್ರಂಪಾಡಿ ನಿವಾಸಿ ಮಹಾದೇವ ಕೊಲೆಯಾದ ದುರ್ದೈವಿ. ಈತನ ಸಹೋದರ ನಿಂಗಪ್ಪ ಗೌಡ ಕೊಲೆ ಆರೋಪಿ.

ಪ್ರಕರಣದ ವಿವರ: ದಿನಾಂಕ 01.12 .2022 ರಂದು ಸಾಯಂಕಾಲ ಕೆಮ್ಮಿಂಜೆ ಗ್ರಾಮದ ಮುಕ್ರಂಪಾಡಿ ಬಳಿ ನ್ಯೂ ಲೈಫ್ ಫಿಲಾಶಿಪ್ ಚರ್ಚ್ ಹತ್ತಿರದ ಸೈಟ್ನಲ್ಲಿ ಗಾರೆ ಕೆಲಸ ಮಾಡುವ ನಿಂಗಪ್ಪ ಗೌಡ ಮತ್ತು ಮಹಾದೇವ ಎಂಬ ಸಹೋದರ ನಡುವೆ ಕ್ಷುಲ್ಲಕ್ಕ ಕಾರಣಕ್ಕೆ ಗಲಾಟೆ ಪ್ರಾರಂಭಗೊಂಡಿತ್ತು. ಇದು ಮುಂದುವರಿದಯ ನಿಂಗಪ್ಪ ಗೌಡನು ಮಹಾದೇವನಿಗೆ ಕಬ್ಬಿಣದ ರಾಡಿನಿಂದ ತಲೆಗೆ ಮತ್ತು ಮೈಯಿಗೆ ಬಲವಾಗಿ ಹೊಡೆದು ಹಲ್ಲೆಗೊಳಿಸಿ , ಅಲ್ಲಿಂದ ಓಡಿಹೋಗಿದ್ದ.

ಗಾಯಗೊಂಡ ಮಹದೇವನನ್ನು ಪುತ್ತೂರು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ವೈದ್ಯರು ಪರೀಕ್ಷಿಸಲಾಗಿ ಆತ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದರು.

ಪ್ರಕರಣದ ಕುರಿತು ಪುತ್ತೂರು ನಗರ ಠಾಣಾ ಅ.ಕ್ರ 97/ 2022 ಕಲಂ 302 IPC ರಂತೆ ಪ್ರಕರಣ ದಾಖಲಾಗಿತ್ತು.

ಪೊಲೀಸ್ ಅಧೀಕ್ಷಕ ಋಷಿಕೇಶ್ ಸೋನಾವಾಣಿ ದ.ಕ ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ ದ.ಕ ಜಿಲ್ಲೆ ಇವರ ನಿರ್ದೇಶನದಂತೆ ಪೊಲೀಸ್ ಉಪಾಧ್ಯಕ್ಷಕರಾದ ಪುತ್ತೂರು ಉಪ ವಿಭಾಗ ವೀರಯ್ಯ ಹಿರೇಮಠ್‌ರ ಮಾರ್ಗದರ್ಶನದಂತೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಎಂ. ಎನ್ .ರಾವ್ ಪೊಲೀಸ್ ನಿರೀಕ್ಷಕರ ವಿಶೇಷ ತಂಡದ ಸಿಬ್ಬಂದಿ ಸ್ಕರಿಯಾ, ಜಗದೀಶ್ , ಕಿರಣ್ ಕುಮಾರ್ , ವಿರುಪಾಕ್ಷರ ತಂಡ ಕೇರಳ ರಾಜ್ಯದ ಕಾಸರಗೋಡು, ಚರ್ಕಳ, ಬದಿಯಡ್ಕ, ಪೆರ್ಲ ,ಹಾಗೂ ಕರ್ನಾಟಕ ರಾಜ್ಯದ ಹಾಸನ ,ಚನ್ನರಾಯಪಟ್ಟಣ , ಶ್ರವಣಬೆಳಗೊಳ, ಚಿಕ್ಕಮಂಗಳೂರು ,ಅರಸೀಕೆರೆ ,
ಶಿವಮೊಗ್ಗ, ಹಾವೇರಿ,ಕಡೆಗಳಲ್ಲಿ ಸಂಚರಿಸಿ ಆರೋಪಿ ಇರುವ ಬಗ್ಗೆ ಮಾಹಿತಿ ಖಚಿತಪಡಿಸಿದ್ದರು.
ಅದರಂತೆ 06.12.2022 ರಂದು ಹಾವೇರಿ ಜಿಲ್ಲೆಯ ಕನಕಾಪುರ ಎಂಬಲ್ಲಿಂದ ಆರೋಪಿ ನಿಂಗಪ್ಪ ಗೌಡನನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದು ದಸ್ತಗಿರಿ ಮಾಡಿದ್ದಾರೆ.

ಆರೋಪಿಯಮ್ನು ಮಾನ್ಯ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಶ್ರೀಕಾಂತ್ ರಾಥೋಡ್ ಪೋಲಿಸ್ ಉಪನಿರೀಕ್ಷಕರು ಪುತ್ತೂರು ನಗರ ಠಾಣೆ ಮತ್ತು ಸಹಾಯಕ ಪೊಲೀಸ್ ಉಪನಿರೀಕ್ಷಕರುಗಳಾದ ಕೃಷ್ಣಪ್ಪ,ಲೋಕನಾಥ್, ಹಾಗೂ ಸಿಬ್ಬಂದಿಗಳಾದ ಸ್ಕರಿಯಾ ಜಗದೀಶ್, ಸುಬ್ರಹ್ಮಣ್ಯ, ಉದಯ್ ಕುಮಾರ್ ,ಬಸವರಾಜ್, ಕಿರಣ್ ಕುಮಾರ್ ,ವಿರೂಪಾಕ್ಷ, ರೇವತಿ. ಸಹಕರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular