Wednesday, September 23, 2026
Homeಗ್ಯಾಜೆಟ್ / ಟೆಕ್ನವದೆಹಲಿ : 2027ರ ಏ.1ರಿಂದ ಮೊಬೈಲ್ ಸ್ಕ್ರೀನ್‌ಗಾರ್ಡ್‌ಗಳಿಗೆ ಹೊಸ ನಿಯಮಕಳಪೆ ಗುಣಮಟ್ಟದ ಟೆಂಪರ್ಡ್ ಗ್ಲಾಸ್‌ಗಳಿಗೆ ಕಡಿವಾಣ.

ನವದೆಹಲಿ : 2027ರ ಏ.1ರಿಂದ ಮೊಬೈಲ್ ಸ್ಕ್ರೀನ್‌ಗಾರ್ಡ್‌ಗಳಿಗೆ ಹೊಸ ನಿಯಮಕಳಪೆ ಗುಣಮಟ್ಟದ ಟೆಂಪರ್ಡ್ ಗ್ಲಾಸ್‌ಗಳಿಗೆ ಕಡಿವಾಣ.

ನವದೆಹಲಿ : ದೇಶದಲ್ಲಿ ಮಾರಾಟವಾಗುವ ಮೊಬೈಲ್ ಸ್ಕ್ರೀನ್‌ಗಾರ್ಡ್‌ ಹಾಗೂ ಟೆಂಪರ್ಡ್ ಗ್ಲಾಸ್‌ಗಳ ಗುಣಮಟ್ಟಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.

2027ರ ಏಪ್ರಿಲ್ 1ರಿಂದ ಮೊಬೈಲ್ ಸ್ಕ್ರೀನ್ ಪ್ರೊಟೆಕ್ಟರ್‌ಗಳು ಭಾರತೀಯ ಗುಣಮಟ್ಟ ಪ್ರಾಧಿಕಾರ (BIS) ನಿಗದಿಪಡಿಸಿರುವ ಮಾನದಂಡಗಳನ್ನು ಪಾಲಿಸುವುದು ಕಡ್ಡಾಯವಾಗಲಿದೆ.
ಮೊಬೈಲ್ ಸ್ಕ್ರೀನ್ ರಕ್ಷಣೆಗೆ ಬಳಸುವ ಗಾಜನ್ನು ಇದೇ ಮೊದಲ ಬಾರಿಗೆ BIS ಮಾನದಂಡದ ವ್ಯಾಪ್ತಿಗೆ ತರಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಸ್ಕ್ರೀನ್‌ಗಾರ್ಡ್‌ಗಳು ದಾಸ್ತಾನು ಇರುವ ಹಿನ್ನೆಲೆಯಲ್ಲಿ ನಿಯಮವನ್ನು ತಕ್ಷಣ ಜಾರಿಗೆ ತರುವ ಬದಲು, ಉತ್ಪಾದಕರು ಮತ್ತು ಮಾರಾಟಗಾರರಿಗೆ ಬದಲಾವಣೆಗೆ ಕಾಲಾವಕಾಶ ನೀಡಲಾಗಿದೆ.

ಗುಣಮಟ್ಟಕ್ಕೆ ನಿರ್ದಿಷ್ಟ ಮಾನದಂಡ.

ಹೊಸ ನಿಯಮದಡಿ ಸ್ಕ್ರೀನ್‌ಗಾರ್ಡ್‌ಗಳ ಗಾಜಿನ ಬಲ, ಗಾತ್ರ, ದಪ್ಪ, ಒಲಿಯೋಫೋಬಿಕ್ ಲೇಪನ, ಪಾರದರ್ಶಕತೆ, ಆ್ಯಂಟಿ-ಗ್ಲೇರ್ ತಂತ್ರಜ್ಞಾನ ಹಾಗೂ ಬ್ಲೂ-ಲೈಟ್ ತಡೆಯುವ ಸಾಮರ್ಥ್ಯ ಸೇರಿದಂತೆ ಹಲವು ಅಂಶಗಳಿಗೆ ಮಾನದಂಡ ನಿಗದಿಪಡಿಸಲಾಗಿದೆ. ಈ ಮಾನದಂಡಗಳನ್ನು ಪೂರೈಸುವ ಸ್ಕ್ರೀನ್‌ಗಾರ್ಡ್‌ಗಳನ್ನಷ್ಟೇ ದೇಶದಲ್ಲಿ ಮಾರಾಟ ಹಾಗೂ ಆಮದು ಮಾಡಲು ಅವಕಾಶ ಇರಲಿದೆ. ಇದರೊಂದಿಗೆ ಕಡಿಮೆ ಗುಣಮಟ್ಟದ ಹಾಗೂ ಮಾನದಂಡವಿಲ್ಲದ ಸ್ಕ್ರೀನ್‌ಗಾರ್ಡ್‌ಗಳ ಮಾರಾಟಕ್ಕೆ ಕಡಿವಾಣ ಬೀಳುವ ನಿರೀಕ್ಷೆಯಿದೆ.

ಗ್ರಾಹಕರಿಗೆ ಏನು ಬದಲಾವಣೆ?.

2027ರ ಏಪ್ರಿಲ್ 1ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗುವ ಸ್ಕ್ರೀನ್ ಪ್ರೊಟೆಕ್ಟರ್‌ಗಳು ನಿಗದಿತ ಗುಣಮಟ್ಟದ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ. ಇದರಿಂದ ಗ್ರಾಹಕರು ಖರೀದಿಸುವ ಸ್ಕ್ರೀನ್‌ಗಾರ್ಡ್‌ಗಳ ಗುಣಮಟ್ಟ ಮತ್ತು ಸುರಕ್ಷತೆ ಬಗ್ಗೆ ಹೆಚ್ಚಿನ ಖಾತರಿ ದೊರೆಯುವ ಸಾಧ್ಯತೆಯಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular