Wednesday, October 7, 2026
Homeಗ್ಯಾಜೆಟ್ / ಟೆಕ್ನವದೆಹಲಿ : ಮುಂದಿನ 2 ವರ್ಷದಲ್ಲಿ ದೇಶದ ಮೊದಲ ಸ್ವದೇಶಿ ನಾಗರಿಕ ವಿಮಾನ : ಸಚಿವ...

ನವದೆಹಲಿ : ಮುಂದಿನ 2 ವರ್ಷದಲ್ಲಿ ದೇಶದ ಮೊದಲ ಸ್ವದೇಶಿ ನಾಗರಿಕ ವಿಮಾನ : ಸಚಿವ ರಾಮ್ ಮೋಹನ್ ನಾಯ್ಡು.

ನವದೆಹಲಿ : ಮುಂದಿನ ಎರಡು ವರ್ಷಗಳಲ್ಲಿ ಜಂಟಿ ಉದ್ಯಮದ ಮೂಲಕ ಭಾರತ ತನ್ನ ಮೊದಲ ಸ್ವದೇಶಿ ನಾಗರಿಕ ವಿಮಾನವನ್ನು ಹೊಂದಲಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ತಿಳಿಸಿದ್ದಾರೆ.

ದೇಶದ ನಾಗರಿಕ ವಿಮಾನಯಾನ ಕ್ಷೇತ್ರದ ಸಾಮರ್ಥ್ಯದ ಕುರಿತು ಮಾತನಾಡಿದ ಸಚಿವರು, ಮುಂದಿನ 10 ವರ್ಷಗಳಲ್ಲಿ ದೇಶದಲ್ಲಿ 100ಕ್ಕೂ ಹೆಚ್ಚು ಹೊಸ ವಿಮಾನ ನಿಲ್ದಾಣಗಳು ನಿರ್ಮಾಣವಾಗುವ ನಿರೀಕ್ಷೆಯಿದೆ ಎಂದರು. ಪ್ರಸ್ತುತ ದೇಶದಲ್ಲಿ 165 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿದ್ದು, ದೇಶೀಯ ವಿಮಾನಯಾನ ಸಂಸ್ಥೆಗಳ ಬಳಿಯಿರುವ ಒಟ್ಟು ವಿಮಾನಗಳ ಸಂಖ್ಯೆ ಸುಮಾರು 850ರಷ್ಟಿದೆ ಎಂದು ಅವರು ಮಾಹಿತಿ ನೀಡಿದರು.

ದೇಶೀಯ ವಿಮಾನ ನಿರ್ಮಾಣಕ್ಕೆ ಒತ್ತು ನೀಡುವ ಮೂಲಕ ನಾಗರಿಕ ವಿಮಾನಯಾನ ಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular