Monday, September 28, 2026
Homeವಾಣಿಜ್ಯನವದೆಹಲಿ : ಎಸಿ, ಟಿವಿ, ವಾಷಿಂಗ್‌ ಮೆಷಿನ್‌ ಸೇರಿದಂತೆ ಗೃಹೋಪಯೋಗಿ ವಸ್ತುಗಳು ದುಬಾರಿ ; ಶೇ.3ರಿಂದ...

ನವದೆಹಲಿ : ಎಸಿ, ಟಿವಿ, ವಾಷಿಂಗ್‌ ಮೆಷಿನ್‌ ಸೇರಿದಂತೆ ಗೃಹೋಪಯೋಗಿ ವಸ್ತುಗಳು ದುಬಾರಿ ; ಶೇ.3ರಿಂದ 8ರವರೆಗೆ ಬೆಲೆ ಹೆಚ್ಚಳದ ನಿರೀಕ್ಷೆ.

ನವದೆಹಲಿ : ಹಬ್ಬದ ಋತುವಿನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ, ಅಕ್ಟೋಬರ್‌ 1ರಿಂದ ಎಸಿ, ಎಲ್‌ಇಡಿ ಟಿವಿ, ವಾಷಿಂಗ್‌ ಮೆಷಿನ್‌, ಫ್ರಿಜ್‌ ಸೇರಿದಂತೆ ಹಲವು ಗೃಹೋಪಯೋಗಿ ಉಪಕರಣಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಹಾಗೂ ಉದ್ವಿಗ್ನತೆಯಿಂದ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಉತ್ಪಾದನಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ. ತಾಮ್ರ, ಉಕ್ಕು,ಅಲ್ಯೂಮಿನಿಯಂ ಸೇರಿದಂತೆ ಹಲವು ಕಚ್ಚಾ ವಸ್ತುಗಳ ಬೆಲೆ ಏರಿಕೆಯ ಪರಿಣಾಮ ಕಂಪೆನಿಗಳು ಬೆಲೆ ಪರಿಷ್ಕರಣೆಗೆ ಮುಂದಾಗಿವೆ.

ಮುಖ್ಯವಾಗಿ ನಿರೀಕ್ಷಿಸಲಾಗಿರುವ ಬೆಲೆ ಏರಿಕೆ:

ಎಸಿ, ಡೀಪ್‌ ಫ್ರೀಜರ್‌: ಶೇ.5–8 ವಾಷಿಂಗ್‌ ಮೆಷಿನ್‌, ಫ್ರಿಜ್‌, ಎಲ್‌ಇಡಿ ಟಿವಿ: ಶೇ.3–4 ಕೆಲವು ಟಿವಿ ಮಾದರಿಗಳು: ಗಾತ್ರಕ್ಕೆ ಅನುಗುಣವಾಗಿ ಶೇ.7–20ರವರೆಗೆ ಈ ವರ್ಷದಲ್ಲೇ ಎಲೆಕ್ಟ್ರಾನಿಕ್ಸ್‌ ವಲಯದಲ್ಲಿ ಇದು ಮೂರನೇ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

ಆಗಸ್ಟ್‌ ಮತ್ತು ಸೆಪ್ಟೆಂಬರ್‌ನಲ್ಲಿ ಡೀಲರ್‌ಗಳು ಹಳೆಯ ದರದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಸ್ಟಾಕ್‌ ಖರೀದಿಸಿರುವುದರಿಂದ, ದೀಪಾವಳಿವರೆಗೆ ಕೆಲವು ಉತ್ಪನ್ನಗಳು ಹಳೆಯ ದರದಲ್ಲೇ ಲಭ್ಯವಾಗುವ ಸಾಧ್ಯತೆಯಿದೆ. ಆದರೆ ಹಬ್ಬದ ಋತು ಮುಗಿದ ಬಳಿಕ ಪರಿಷ್ಕೃತ ಬೆಲೆಗಳು ಸಂಪೂರ್ಣವಾಗಿ ಜಾರಿಗೆ ಬರುವ ಸಾಧ್ಯತೆ ಇದೆ.

ಓಣಂ, ದಸರಾ ಹಾಗೂ ದೀಪಾವಳಿ ಅವಧಿಯಲ್ಲಿ ವಾರ್ಷಿಕ ಮಾರಾಟದ ಸುಮಾರು 30–40% ನಡೆಯುವುದರಿಂದ, ಹೆಚ್ಚುತ್ತಿರುವ ಉತ್ಪಾದನಾ ವೆಚ್ಚ ಮತ್ತು ಹಬ್ಬದ ಬೇಡಿಕೆಯ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಕಂಪೆನಿಗಳಿಗೆ ಸವಾಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular