Thursday, March 27, 2025
Flats for sale
Homeವಿದೇಶನವದೆಹಲಿ : ಅಮೆರಿಕಕ್ಕೆ ಸಡ್ಡು ಹೊಡೆಯಲು ಭಾರತ ಮತ್ತು ಐರೋಪ್ಯ ಒಕ್ಕೂಟ ಮಧ್ಯೆ ವರ್ಷಾಂತ್ಯದೊಳಗೆ ಮುಕ್ತ...

ನವದೆಹಲಿ : ಅಮೆರಿಕಕ್ಕೆ ಸಡ್ಡು ಹೊಡೆಯಲು ಭಾರತ ಮತ್ತು ಐರೋಪ್ಯ ಒಕ್ಕೂಟ ಮಧ್ಯೆ ವರ್ಷಾಂತ್ಯದೊಳಗೆ ಮುಕ್ತ ವ್ಯಾಪಾರ ಒಪ್ಪಂದ..!

ನವದೆಹಲಿ : ಭಾರತ ಮತ್ತು ಐರೋಪ್ಯ ಒಕ್ಕೂಟ ಮಧ್ಯೆ ವರ್ಷಾಂತ್ಯದೊಳಗೆ ಮುಕ್ತ ವ್ಯಾಪಾರ ಒಪ್ಪಂದ(ಎಫ್‌ಟಿಎ) ಮಾಡಿಕೊಳ್ಳಲು ಎರಡೂ ಕಡೆಯವರು ಈಗ ಸಹಮತ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಸುಂಕ ಹೆಚ್ಚಳದ ಪರಿಣಾಮ ತಗ್ಗಿಸುವಲ್ಲಿ ಇಂತಹ ಒಪ್ಪಂದ ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ. ಎಫ್‌ಟಿಎಗಾಗಿ ಹಲವಾರು ವರ್ಷಗಳಿಂದ ಮಾತುಕತೆ ಮುಂದುವರಿದಿದ್ದು ಇದೀಗ ಈ ವಿಷಯದಲ್ಲಿ ಮೊದಲ ಬಾರಿ ಬದ್ಧತೆ ವ್ಯಕ್ತವಾಗಿರುವುದು ಇಲ್ಲಿ ಗಮನಾರ್ಹ.

ಐರೋಪ್ಯ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಕಳೆದೆರಡು ದಿನಗಳಿಂದ ಭಾರತಕ್ಕೆ ಭೇಟಿ ನೀಡಿದ್ದು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಜೊತೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೇಲಿನ ಘೋಷಣೆ ಮಾಡಿದರು.ಭಾರತ ಈಗ ಜಗತ್ತಿನ ಅತ್ಯಂತ ಸುರಕ್ಷಿತ ಮಾರುಕಟ್ಟೆಗಳಲ್ಲೊಂದಾಗಿದೆ.ಹೀಗಾಗಿ ಭಾರತದಿಂದ ಪ್ರಮುಖ ರಿಯಾಯಿತಿಗಳನ್ನು ಒಳಗೊಂಡಿರುವ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಎರಡೂ ಕಡೆಯವರು ಅವಿರತ ಪ್ರಯತ್ನಿಸುತ್ತಿದ್ದಾರೆ.

ಮಾತುಕತೆಗೆ ಆಗಾಗ ತೊಡಕು ಭಾರತ-ಐರೋಪ್ಯ ಒಕ್ಕೂಟಗಳ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಎಂಟು ವರ್ಷಗಳ ಕಾಲ ಸ್ಥಗಿತಗೊಂಡ ನಂತರ 2021ರಲ್ಲಿ ಪುನರಾರಂಭಗೊಂಡಿದ್ದವು. ಮಾರ್ಚ್ನಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಸಲು ಮುಂದಾಗಿವೆ.ವರ್ಷದ ಕೊನೆಯಲ್ಲಿ ಭಾರತ-ಐರೋಪ್ಯ ಒಕ್ಕೂಟದ ಸಭೆಯೂ ನಡೆಯಲಿದೆ.

ಅಮೆರಿಕ ಈಗ ನ್ಯಾಯಸಮ್ಮತವಲ್ಲದ ಶೇ.25ರಷ್ಟು ಸುಂಕ ಹೇರಲು ಮುಂದಾಗಿರುವುದರಿಂದ ಭಾರತದೊಂದಿಗೆ ದೃಢವಾದ ವ್ಯಾಪಾರ ಹಾಗೂ ಭದ್ರತಾ ಸಂಬಂಧ ಐರೋಪ್ಯ ಒಕ್ಕೂಟಕ್ಕೆ ಹಿಂದೆಂದಿಗಿಂತಲೂ ಅವಶ್ಯಕವಾಗಿದೆ. ಭಾರತದಲ್ಲಿ ಐರೋಪ್ಯ ಒಕ್ಕೂಟದ ದೇಶಗಳ 6೦೦೦ಕ್ಕೂ ಹೆಚ್ಚು ಕಂಪನಿಗಳಿವೆ.ಹೀಗಾಗಿ ಐರೋಪ್ಯ ಒಕ್ಕೂಟದ ಸರಕುಗಳೇ ಅತಿದೊಡ್ಡ ವ್ಯಾಪಾರ ಪಾಲುದಾರಿಕೆಯನ್ನು ನೀಡುತ್ತಿವೆ.

ಇಎಫ್‌ಟಿಎ ಜತೆ ಒಪ್ಪಂದ ತನ್ಮಧ್ಯೆ ಭಾರತ ಮತ್ತು ಇಂಗ್ಲೆಂಡ್ ನಲ್ಲಿ ಮಹಾಚುನಾವಣೆಗಳ ಹಿನ್ನೆಲೆಯಲ್ಲಿ ಒಂದು ವರ್ಷ ಸ್ಥಗಿತಗೊಂಡಿರುವ ಮುಕ್ತ ವ್ಯಾಪಾರ ಒಪ್ಪಂದ ಕುರಿತ ಮಾತುಕತೆ ಈ ವಾರದಲ್ಲಿ ಆರಂಭವಾಗಿದೆ. ಕಳೆದ ವರ್ಷ ಭಾರತವು ಯುರೋಪಿನ ಮುಕ್ತ ವ್ಯಾಪಾರ ಸಂಘ(ಇಎಫ್‌ಟಿಎ)ದೊAದಿಗೆ 100 ಶತಕೋಟಿ ಡಾಲರ್ ಮೌಲ್ಯದ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದ್ದವು.

RELATED ARTICLES

LEAVE A REPLY

Please enter your comment!
Please enter your name here

Most Popular