Sunday, July 5, 2026
Homeದೇಶತಿರುವನಂತಪುರಂ ; ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ.

ತಿರುವನಂತಪುರಂ ; ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ.

ತಿರುವನಂತಪುರಂ ; V. D. ಸತೀಶನ್ ಅವರನ್ನು ಕೇರಳದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ವಿಧಾನಸಭೆ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಭರ್ಜರಿ ಗೆಲುವು ಸಾಧಿಸಿದ ಬಳಿಕ ಕಳೆದ 10 ದಿನಗಳಿಂದ ನಡೆದ ತೀವ್ರ ಚರ್ಚೆಗಳ ಅಂತ್ಯವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಆರು ಬಾರಿ ಶಾಸಕರಾಗಿರುವ ಸತೀಶನ್, ಕೇರಳ ಕಾಂಗ್ರೆಸ್‌ನ ಪ್ರಮುಖ ಮತ್ತು ಜನಪ್ರಿಯ ನಾಯಕ ರಲ್ಲಿ ಒಬ್ಬರಾಗಿದ್ದಾರೆ. ಮುಖ್ಯಮಂತ್ರಿ ಹುದ್ದೆಗಾಗಿ ಹಿರಿಯ ನಾಯಕರಾದ K. C. ವೇಣುಗೋಪಾಲ ಹಾಗೂ ರಮೇಶ್ ಚೆನ್ನಿತ್ತಲ ಅವರ ಹೆಸರುಗಳೂ ಬಲವಾಗಿ ಕೇಳಿಬಂದಿದ್ದವು.

ಕಳೆದ ಕೆಲವು ದಿನಗಳಿಂದ ಕೇರಳ ಕಾಂಗ್ರೆಸ್‌ನಲ್ಲಿ ತೀವ್ರ ಗುಂಪುಗಾರಿಕೆ ಮತ್ತು ಲಾಬಿಯಿಂಗ್ ನಡೆದಿದ್ದರೂ, ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ವಿ.ಡಿ. ಸತೀಶನ್ ಅವರ ಹೆಸರನ್ನು ಅಂತಿಮಗೊಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular