Thursday, May 14, 2026
Flats for sale
Homeರಾಶಿ ಭವಿಷ್ಯಚೆನ್ನೈ : ವಿಜಯ್ ಸರ್ಕಾರದ ಭವಿಷ್ಯ ಕುರಿತು ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ,“ಸಿಎಂ ಆದರೂ ಸರ್ಕಾರ ದೀರ್ಘಕಾಲ...

ಚೆನ್ನೈ : ವಿಜಯ್ ಸರ್ಕಾರದ ಭವಿಷ್ಯ ಕುರಿತು ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ,“ಸಿಎಂ ಆದರೂ ಸರ್ಕಾರ ದೀರ್ಘಕಾಲ ಉಳಿಯುವುದು ಕಷ್ಟ” ಎಂದ ಜ್ಯೋತಿಷಿ ವೇಣುಸ್ವಾಮಿ.

ಚೆನ್ನೈ : ತಮಿಳುನಾಡಿನ ಹೊಸ ಮುಖ್ಯಮಂತ್ರಿ ಹಾಗೂ ನಟ ದಳಪತಿ ವಿಜಯ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಸೆಲೆಬ್ರಿಟಿ ಜ್ಯೋತಿಷಿ ವೇಣುಸ್ವಾಮಿ ನೀಡಿರುವ ಹೇಳಿಕೆ ಇದೀಗ ರಾಜಕೀಯ ಹಾಗೂ ಸಿನಿರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತೀಯ ಸಿನಿತಾರೆಯರ ಭವಿಷ್ಯ ಹೇಳಿಕೆಗಳಿಂದ ಗಮನ ಸೆಳೆದಿರುವ ವೇಣುಸ್ವಾಮಿ, ವಿಜಯ್ ಮುಖ್ಯಮಂತ್ರಿ ಆದರೂ ಅವರ ಸರ್ಕಾರ ದೀರ್ಘಕಾಲ ಉಳಿಯುವ ಸಾಧ್ಯತೆ ಕಡಿಮೆ ಎಂದು ಭವಿಷ್ಯ ನುಡಿದಿದ್ದಾರೆ.

ವಿಜಯ್ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ ಆದರೆ ಸರ್ಕಾರ ಒಂದು ತಿಂಗಳು, ಆರು ತಿಂಗಳು ಅಥವಾ ಗರಿಷ್ಠ ಒಂದು ವರ್ಷದೊಳಗೆ ಕುಸಿಯುವ ಸಾಧ್ಯತೆ ಇದೆ ತಮಿಳುನಾಡಿನಲ್ಲಿ ಮತ್ತೆ ಚುನಾವಣೆ ಎದುರಾಗುವ ಸಾಧ್ಯತೆ ಶೇ.100ರಷ್ಟು ಇದೆ ಎಂದು ಅವರು ಹೇಳಿದ್ದಾರೆ ಈ ಹೇಳಿಕೆ ವಿಜಯ್ ಅಭಿಮಾನಿಗಳಲ್ಲಿ ಆಕ್ರೋಶ ಹುಟ್ಟಿಸಿದ್ದು, ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

“ತ್ರಿಷಾ ಜಾತಕವೇ ವಿಜಯ್‌ಗೆ ಅದೃಷ್ಟ”

ವೇಣುಸ್ವಾಮಿ ಮತ್ತೊಂದು ಅಚ್ಚರಿಯ ಹೇಳಿಕೆ ನೀಡಿದ್ದು, ನಟಿ ತ್ರಿಷಾ ಅವರ ಜಾತಕ ಪ್ರಭಾವವೇ ವಿಜಯ್ ರಾಜಕೀಯ ಯಶಸ್ಸಿಗೆ ಕಾರಣ ಎಂದಿದ್ದಾರೆ. “ವಿಜಯ್ ಪಕ್ಕದಲ್ಲಿ ತ್ರಿಷಾ ಇರದೇ ಇದ್ದರೆ ಕಥೆ ಬೇರೆಯಾಗಿರುತ್ತಿತ್ತು. ಇಬ್ಬರ ಜಾತಕಗಳ ಗ್ರಹಗತಿಗಳ ಹೊಂದಾಣಿಕೆ ವಿಜಯ್‌ಗೆ ಅದೃಷ್ಟ ತಂದಿದೆ,” ಎಂದು ಹೇಳಿದ್ದಾರೆ.

ಈ ನಡುವೆ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇತ್ತೀಚೆಗೆ, “ಮುಂದಿನ ಆರು ತಿಂಗಳು ಹೊಸ ಸರ್ಕಾರಕ್ಕೆ ತೊಂದರೆ ಕೊಡುವುದಿಲ್ಲ, ಪರಿಸ್ಥಿತಿಯನ್ನು ಗಮನಿಸುತ್ತೇವೆ,” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಹಾಗೂ ವೇಣುಸ್ವಾಮಿ ಭವಿಷ್ಯವನ್ನು ಈಗ ರಾಜಕೀಯ ವಿಶ್ಲೇಷಕರು ಪರಸ್ಪರ ಸಂಪರ್ಕಿಸಿ ಚರ್ಚಿಸುತ್ತಿದ್ದಾರೆ.

ಭರವಸೆ ಈಡೇರಿಕೆ ದೊಡ್ಡ ಸವಾಲಾಗಿದೆ ಎಂದು ಹೇಳಿದ್ದಾರೆ. ಚುನಾವಣಾ ಪ್ರಚಾರದ ವೇಳೆ ವಿಜಯ್ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ತಿಂಗಳಿಗೆ ₹2,೫೦೦,ಉಚಿತ ಗ್ಯಾಸ್ ಸಿಲಿಂಡರ್,ವಿವಿಧ ಜನಪರ ಯೋಜನೆಗಳನ್ನು ಘೋಷಿಸಿತ್ತು. ಆದರೆ ರಾಜ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ಇವುಗಳನ್ನು ಜಾರಿಗೆ ತರುವುದು ಸವಾಲಾಗಬಹುದು ಎನ್ನಲಾಗುತ್ತಿದೆ.

“ವೇಣುಸ್ವಾಮಿ ಭವಿಷ್ಯಗಳು ಎಲ್ಲವೂ ನಿಜವಾಗಿಲ್ಲ”

ಆದರೆ ವೇಣುಸ್ವಾಮಿ ನೀಡಿದ ಎಲ್ಲಾ ಭವಿಷ್ಯಗಳೂ ನಿಜವಾಗಿಲ್ಲ ಎಂಬ ಮಾತು ಕೂಡ ಕೇಳಿಬರುತ್ತಿದೆ. ಆಂಧ್ರ ಪ್ರದೇಶ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ಮತ್ತೆ ಸಿಎಂ ಆಗುತ್ತಾರೆ ಎಂದು ಹೇಳಿದ್ದರೂ ಅದು ನಿಜವಾಗಿರಲಿಲ್ಲ. ಹೀಗಾಗಿ ವಿಜಯ್ ಸರ್ಕಾರದ ಕುರಿತು ನೀಡಿರುವ ಈ ಭವಿಷ್ಯ ನಿಜವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular