Sunday, March 16, 2025
Flats for sale
Homeರಾಜ್ಯಚಿಕ್ಕಮಗಳೂರು : ನಕ್ಸಲ್ ನಾಯಕ ವಿಕ್ರಂಗೌಡ ಎನ್ಕೌಂಟರ್ ಬೆನ್ನಲ್ಲೇ ಕಾಫಿನಾಡಿನಲ್ಲಿ ಮುಂದುವರೆದ `ಕ್ಯೂಬಿಂಗ್ ’ ಕಾರ್ಯಾಚರಣೆ.

ಚಿಕ್ಕಮಗಳೂರು : ನಕ್ಸಲ್ ನಾಯಕ ವಿಕ್ರಂಗೌಡ ಎನ್ಕೌಂಟರ್ ಬೆನ್ನಲ್ಲೇ ಕಾಫಿನಾಡಿನಲ್ಲಿ ಮುಂದುವರೆದ `ಕ್ಯೂಬಿಂಗ್ ’ ಕಾರ್ಯಾಚರಣೆ.

ಚಿಕ್ಕಮಗಳೂರು : ಕಳೆದ ಕೆಲವು ದಿನಗಳ ಹಿಂದೆ ಕಾಫಿನಾಡು ಕೃಷ್ಣನಗರಿಯಲ್ಲಿ ನಕ್ಸಲರ ಹೆಜ್ಜೆಗುರುತು ಸಿಕ್ಕ 15-20 ದಿನದಲ್ಲೇ ನಕ್ಸಲ್ ನಾಯಕ ವಿಕ್ರಂಗೌಡ ಎಎನ್‌ಎಫ್ ಗುಂಡಿಗೆ ಕಾಡಲ್ಲೇ ಹತನಾದ. ಇದೀಗ ಕರ್ನಾಟಕದ ಐವರು ನಕ್ಸಲರಿಗಾಗಿ ಚಿಕ್ಕಮಗಳೂರು ಜಿಲ್ಲೆಯ ಸುತ್ತಮುತ್ತ ಕ್ಯೂಬಿಂಗ್ ಕಾರ್ಯಾಚರಣೆ ತೀವ್ರಗೊಂಡಿದೆ.

ಒಂದೂವರೆ ತಿಂಗಳ ಹಿಂದೆ ಕೇರಳದಿಂದ ಬಂದ ನಕ್ಸಲರು 2 ತಂಡ ಮಾಡಿಕೊಂಡು ಉಡುಪಿ- ಚಿಕ್ಕಮಗಳೂರು ಸೇರಿದ್ದರು. ಮುಂಡಗಾರು ಲತಾ ಕಾಡಲ್ಲಿ ಕಾಣೆಯಾದ ಬೆನ್ನಲ್ಲೇ ವಿಕ್ರಂಗೌಡ ಉಡುಪಿಯಲ್ಲಿ ಎನ್‌ಕೌಂಟರ್
ಆದ. ನಕ್ಸಲ್ ನಿಗ್ರಹ ಪಡೆಯಿಂದ ಕ್ಯೂಬಿಂಗ್ ಕಾರ್ಯಾಚರಣೆ ಮುಂದುವರೆದಿದ್ದು, ಕರ್ನಾಟಕದ 5 ನಕ್ಸಲರಿಗಾಗಿ ಇದೀಗ ಶೋಧ ಕಾರ್ಯ ತೀವ್ರಗೊಂಡಿದೆ.

ಶೃಂಗೇರಿ ತಾಲೂಕಿನ ಸುತ್ತಿನ ಗುಡ್ಡದಲ್ಲಿ ನಕ್ಸಲರು ಓಡಾಡಿರುವ ಶಂಕೆ ವ್ಯಕ್ತವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಸುತ್ತಿನ ಗುಡ್ಡದಲ್ಲಿ ಇದೀಗ ಅವರು ಸುತ್ತಾಡಿರುವ ಶಂಕೆ ವ್ಯಕ್ತವಾಗಿದ್ದರಿಂದ
ಸುತ್ತಿನಗುಡ್ಡ ಕೆರೆಕಟ್ಟೆ ಅರಣ್ಯದಲ್ಲಿ ನಕ್ಸಲೆಗಳಿಗಾಗಿ ಕೋಂಬಿಕಾರ್ಯಚರಣೆ ನಡೆಯುತ್ತಿದೆ ಕಳೆದ ನಾಲ್ಕು ದಿನಗಳಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಹಾಗಾಗಿ ಎನ್‌ಕೌಂಟರ್ ಬಳಿಕ ನೋ ಸರೆಂಡರ್ ಎಂದು
ಎಎನ್‌ಎಫ್ ಕ್ಯೂಬಿಂಗ್ ಕಂಡು ನಕ್ಸಲರು ಜೀವ ಭಯದಲ್ಲಿ ಮತ್ತೆ ಕೇರಳಕ್ಕೆ ತೆರಳಿರಬಹುದು ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular