ಚಿಕ್ಕಮಗಳೂರು : ನಗರದ ಟಿಪ್ಪು ಕಾಲೋನಿಯಲ್ಲಿ ಈದ್ ಮಿಲಾದ್ ಹಿನ್ನೆಲೆ 40 ಅಡಿ ಟಿಪ್ಪು ಕಟೌಟ್ ಹಾಕಲಾಗಿದೆ.
ಕಟೌಟ್ ಹಾಕಿ ದೇಶವಿರೋಧಿ ಹಾಗೂ ಕೋಮು ಸೌಹಾರ್ದ ಕದಡುವ ರೀತಿಯ ಹಾಡು ಬಳಸಿ ರೀಲ್ಸ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
‘ಚಿಕ್ಕಮಗಳೂರು ಪವರ್ ಟಿಪ್ಪು ಬಾಯ್ಸ್’ ಹೆಸರಿನ ಟ್ವಿಟರ್ ಖಾತೆಯಲ್ಲಿ ಯುವಕರು ರೀಲ್ಸ್ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಲಾ ಅಂಡ್ ಆರ್ಡರ್ ಪಿಎಸ್ಐ ಧನರಾಜ್ ಅವರು ಚಿಕ್ಕಮಗಳೂರು ನಗರ ಠಾಣೆಗೆ ದೂರು ನೀಡಿದ್ದಾರೆ.
ಧಾರ್ಮಿಕ ನಂಬಿಕೆಗೆ ಅಪಮಾನ ಮಾಡುವ ಹಾಗೂ ಉದ್ದೇಶಪೂರ್ವಕವಾಗಿ ದ್ವೇಷ ಹರಡುವ ರೀತಿಯಲ್ಲಿ ಹಾಡು ಬಳಕೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕೋಮು ಸೌಹಾರ್ದ ಕದಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದೂರು ದಾಖಲಾಗಿದೆ.

