Saturday, July 25, 2026
Homeರಾಜ್ಯಚಿಕ್ಕಬಳ್ಳಾಪುರ : ನಂದಿಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ತಡೆಗೋಡೆಗೆ ಡಿಕ್ಕಿ,ಪ್ರಾಣಾಪಾಯದಿಂದ ಪಾರು,ವೀಡಿಯೋ ವೈರಲ್ ..!

ಚಿಕ್ಕಬಳ್ಳಾಪುರ : ನಂದಿಗಿರಿಧಾಮದಲ್ಲಿ ಪ್ಯಾರಾಗ್ಲೈಡಿಂಗ್ ತಡೆಗೋಡೆಗೆ ಡಿಕ್ಕಿ,ಪ್ರಾಣಾಪಾಯದಿಂದ ಪಾರು,ವೀಡಿಯೋ ವೈರಲ್ ..!

ಬೆಂಗಳೂರು : ಪ್ಯಾರಾಗ್ಲೈಡಿಂಗ್ ಹಾರುವ ವೇಳೆ ತಡೆಗೋಡೆಗೆ ಡಿಕ್ಕಿ ಹೊಡೆದು ಪ್ರಪಾತಕ್ಕೆ ಉರುಳಿ ಜಸ್ಟ್ ಮಿಸ್ ಆಗಿ ಎಸ್ಕೇಫ್ ಆಗಿ ಪ್ರಾಣಾಪಾಯದಿಂದ ಪಾರಾದ ಘಟನೆ ನಂದಿಗಿರಿಧಾಮದ ಉತ್ತರ ಭಾಗದ ವ್ಯೂ ಪಾಯಿಂಟ್ ಬಳಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಬೆಂಗಳೂರು ಅಡ್ವೆಂಚರಸ್ ಸ್ಪೋರ್ಟ್ಸ್ ಎಂಟರ್ಪ್ರೈಸ್ BASE. ಸಂಸ್ಥೆ ಪ್ಯಾರಾಗ್ಲೈಡಿಂಗ್ ನಡೆಸುತ್ತಿದ್ದು ಪ್ಯಾರಾಗ್ಲೈಡಿಂಗ್ ಸಾಹಸಕ್ಕೆ ಪ್ರವಾಸಿಗರು ಮುಗಿಬೀಳುತ್ತಿರುವುದು ಕಂಡುಬಂದಿದೆ. ಪ್ಯಾರಾಗ್ಲೈಡಿಂಗ್ ವೇಳೆ ತಡೆಗೋಡೆ ಡಿಕ್ಕಿ ಹೊಡೆದ ಪರಿಣಾಮ ಅಪ್ಪಿ ತಪ್ಪಿ ಬಿದ್ದಿದ್ದರೆ ಸಾವಿರಾರು ಅಡಿ ಕೆಳಗಿನ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.ಈ ಅವಘಡ ಇತ್ತೀಚೆಗೆ ನಡೆದಿರುವ ಬಗ್ಗೆ ಮಾಹಿತಿ ದೊರೆತಿದ್ದು ಅಪಾಯಕಾರಿ ಪ್ಯಾರಾಗ್ಲೈಡಿಂಗ್ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular