Saturday, July 25, 2026
Homeರಾಜ್ಯತುಮಕೂರು : ಗೃಹ ಸಚಿವರ ಸ್ವಕ್ಷೇತ್ರದಲ್ಲಿ ವಾಲ್ಮೀಕಿ ಜಯಂತಿ ದಿನದಂದೇ ವಾಲ್ಮೀಕಿ ಗುರುಗಳ ಪುತ್ಥಳಿ ಕದ್ದೊಯ್ದ...

ತುಮಕೂರು : ಗೃಹ ಸಚಿವರ ಸ್ವಕ್ಷೇತ್ರದಲ್ಲಿ ವಾಲ್ಮೀಕಿ ಜಯಂತಿ ದಿನದಂದೇ ವಾಲ್ಮೀಕಿ ಗುರುಗಳ ಪುತ್ಥಳಿ ಕದ್ದೊಯ್ದ ಕಿಡಿಗೇಡಿಗಳು.

ತುಮಕೂರು : ವಾಲ್ಮೀಕಿ ಸಮುದಾಯಕ್ಕೆ ಅಪಮಾನವಾಗಿದ್ದು ಗೃಹ ಸಚಿವರ ಸ್ವಕ್ಷೇತ್ರದಲ್ಲಿ ವಾಲ್ಮೀಕಿ ಜಯಂತಿ ದಿನದಂದೇ ವಾಲ್ಮೀಕಿ ಗುರುಗಳ ಪುತ್ಥಳಿಯನ್ನು ಕಿಡಿಗೇಡಿಗಳು ಕದ್ದೊಯ್ದ ಘಟನೆ ನಡೆದಿದೆ.

ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದಲ್ಲಿಈ ಘಟನೆ ನಡೆದಿದ್ದು . ವಾಲ್ಮೀಕಿ ಜಯಂತಿ ದಿನದಂದೇ ವಾಲ್ಮೀಕಿ ಗುರುಗಳ ಪುತ್ಥಳಿ ಕಿಡಿಗೇಡಿಗಳು ರಾತ್ರೋರಾತ್ರಿ ಕದ್ದೊಯ್ದಿದ್ದಾರೆ.ಈ ಹಿನ್ನೆಲೆ ಆಕ್ರೋಶಗೊಂಡ ವಾಲ್ಮೀಕಿ ಸಮುದಾಯ ನಾಯಕರು ಮಹಿಳೆಯರು ಸೇರಿದಂತೆ ನೂರಾರು ವಾಲ್ಮೀಕಿ ಸಮುದಾಯದ ಜನರು ಕೊರಟಗೆರೆ ಪಟ್ಟಣದಲ್ಲಿ ತಡರಾತ್ರಿ ಧರಣಿಗೆ ಕುಳಿತಿದ್ದಾರೆ.ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಸ್ಥಳಕ್ಕೆ ತುಮಕೂರು ಎಸ್.ಪಿ ಅಶೋಕ್ ಕೆ.ವಿ, ಹಾಗೂ ಎಎಸ್ ಪಿ ಮರಿಯಪ್ಪ ಭೇಟಿನೀಡಿದ್ದಾರೆ.

ಕೊರಟಗೆರೆ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯದ ನಾಯಕರು ಧರಣಿಗೆ ಕುಳಿತಿದ್ದು ಉದ್ದೇಶ ಪೂರ್ವಕವಾಗಿ ಈ ಕೃತ್ಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.ಕೂಡಲೇ ಕಿಡಿಗೇಡಿಗಳನ್ನ ಬಂಧಿಸುವಂತೆ ಆಗ್ರಹಿಸಿದ್ದು ಕಿಡಿಗೇಡಿಗಳನ್ನ ಬಂಧಿಸುವವರೆಗೂ ಧರಣಿ ಕೈಬಿಡಲ್ಲ ಎಂದು ಹಿಡಿದ ವಾಲ್ಮೀಕಿ ಸಮುದಾಯದ ನಾಯಕರು ಪಟ್ಟು ಹಿಡಿದಿದ್ದಾರೆ.

ಈ ಬಗ್ಗೆ ಕೂಡಲೇ ವಾಲ್ಮೀಕಿ ಪುತ್ಥಳಿ ಕದ್ದೋಯ್ದ ಕಿಡಿಗೇಡಿಗಳನ್ನ ಪತ್ತೆ ಹಚ್ಚುವುದಾಗಿ ತುಮಕೂರು ಎಸ್ ಪಿ ಅಶೋಕ್ ಕೆ.ವಿ ಭರವಸೆ ನೀಡಿದ್ದು ಧರಣಿ ಕೈ ಬಿಡುವಂತೆ ವಾಲ್ಮೀಕಿ ಸಮುದಾಯದ ನಾಯಕರಿಗೆ ಪೊಲೀಸರು ಮನವಿಮಾಡಿದ್ದಾರೆ. ಆದರೆ ಧರಣಿ ಕೈಬಿಡದೆ ವಾಲ್ಮೀಕಿ ಸಮುದಾಯದ ನಾಯಕರು ಪ್ರತಿಭಟನೆ ಮುಂದುವರೆಸಿದ್ದಾರೆಂದು ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular