Wednesday, May 20, 2026
Flats for sale
Homeದೇಶಕೋಲ್ಕತಾ : ಗೋಹತ್ಯೆ ನಿಲ್ಲಿಸಿ, ಹಿಂದೂಗಳ ಭಾವನೆ ಗೌರವಿಸಿ: ಕೋಲ್ಕತಾ ಇಮಾಮ್ ಕರೆ.

ಕೋಲ್ಕತಾ : ಗೋಹತ್ಯೆ ನಿಲ್ಲಿಸಿ, ಹಿಂದೂಗಳ ಭಾವನೆ ಗೌರವಿಸಿ: ಕೋಲ್ಕತಾ ಇಮಾಮ್ ಕರೆ.

ಕೋಲ್ಕತಾ : ಪಶ್ಚಿಮ ಬಂಗಾಳದ ಮುಸ್ಲಿಮರು ಗೋಹತ್ಯೆ ನಿಷೇಧ ಕಾಯ್ದೆಯನ್ನು ಪಾಲಿಸಿ, ಹಿಂದುಗಳ ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು ಎಂದು ಕೋಲ್ಕತಾದ ನಾಕೋಡಾ ಮಸೀದಿ ಇಮಾಮ್ ಕರೆ ನೀಡಿದ್ದಾರೆ.

ಇತ್ತೀಚೆಗೆ ಪಶ್ಚಿಮ ಬಂಗಾಳ ಸರ್ಕಾರ ಜಾರಿಗೆ ತಂದಿರುವ ಪ್ರಾಣಿವಧೆ ನಿಯಂತ್ರಣ ಸಂಬಂಧಿತ ನಿಯಮಾವಳಿಗಳ ಕುರಿತು ಪ್ರತಿಕ್ರಿಯಿಸಿದ ಮೌಲಾನಾ ಮೊಹಮದ್ ಶಫೀಕ್ ಖಾಸ್ಮಿ, “ಮುಸ್ಲಿಮರು ಸ್ವಯಂಪ್ರೇರಿತವಾಗಿ ಹಸುಗಳ ಹತ್ಯೆ ನಿಲ್ಲಿಸಿ, ಹಿಂದೂ ಸಮುದಾಯದ ಭಾವನೆಗಳಿಗೆ ಗೌರವ ನೀಡಬೇಕು” ಎಂದು ಅಭಿಪ್ರಾಯಪಟ್ಟಿದ್ದಾರೆ.

ಅವರು ಕೇಂದ್ರ ಸರ್ಕಾರವನ್ನು ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸುವಂತೆ ಹಾಗೂ ಗೋಹತ್ಯೆ ಮತ್ತು ಗೋಮಾಂಸ ರಫ್ತಿನ ಮೇಲೆ ಸಂಪೂರ್ಣ ನಿಷೇಧ ಹೇರಬೇಕೆಂದು ಆಗ್ರಹಿಸಿದ್ದಾರೆ. ಇತ್ತೀಚೆಗೆ ಜಾರಿಗೊಂಡ ಹೊಸ ನಿಯಮಾವಳಿಗಳ ಪ್ರಕಾರ, ಸಂಬಂಧಿತ ಇಲಾಖೆಯ ‘ಫಿಟ್ ಸರ್ಟಿಫಿಕೇಟ್’ ಇಲ್ಲದೆ ಹಸು, ಎತ್ತು, ಗೂಳಿ, ಕರು ಹಾಗೂ ಎಮ್ಮೆಗಳನ್ನು ವಧೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ. ಆದರೆ, ಅಗತ್ಯ ಮೂಲಸೌಕರ್ಯಗಳ ಕೊರತೆಯಿಂದ ಹೊಸ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಸವಾಲುಗಳಿವೆ ಎಂದು ಇಮಾಮ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular