Monday, July 6, 2026
Homeಜಿಲ್ಲೆಕುಂದಾಪುರ: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅರಣ್ಯ ಇಲಾಖೆಯ ಡೀಲಿಂಗ್...

ಕುಂದಾಪುರ: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅರಣ್ಯ ಇಲಾಖೆಯ ಡೀಲಿಂಗ್ ಗುಮಾಸ್ತ.

ಕುಂದಾಪುರ : ಕುಂದಾಪುರ ಅರಣ್ಯ ಇಲಾಖೆಯ ಗುಮಾಸ್ತರೊಬ್ಬರು ನವೆಂಬರ್ 29, ಬುಧವಾರ 15,000 ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಸಿಬ್ಬಂದಿಯ ಕೈಗೆ ಸಿಕ್ಕಿಬಿದ್ದಿದ್ದಾರೆ.

ಅರಣ್ಯ ಇಲಾಖೆಯ ವಶದಲ್ಲಿದ್ದ ಆಲೂರಿನ ಆದಿತ್ಯ ಎಂಬುವವರಿಗೆ ಸೇರಿದ ವಾಹನವನ್ನು ಬಿಡಿಸಲು 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಲ್ಲಿ ಗುಮಾಸ್ತ ಬಿ.ಮಂಜುನಾಥ್ ಪೂಜಾರಿಯನ್ನು ಬಂಧಿಸಲಾಗಿದೆ.

ಲಂಚ ನೀಡಲು ಆದಿತ್ಯ ನಿರಾಕರಿಸಿದಾಗ ಉಡುಪಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಡಿಎಸ್ಪಿ ಕೆ.ಸಿ. ಪ್ರಕಾಶ್, ಮಂಜುನಾಥ್, ರಫೀಕ್, ತಂಡದ ಸದಸ್ಯರಾದ ನಾಗೇಂದ್ರ ಉಡುಪಿ, ನಾಗರಾಜ್, ರಾಘವೇಂದ್ರ, ರೋಹಿತ್, ಪ್ರಸನ್ನ ದೇವಾಡಿಗ, ಅಬ್ದುಲ್ ಜಲಾಲ್, ರವೀಂದ್ರ ಗನ್ನಿಗ, ರಮೇಶ್, ಸೂರಜ್, ಸುಧೀರ್ ಸೇರಿದಂತೆ ಅಧಿಕಾರಿಗಳು ದಾಳಿ ನಡೆಸಿ ಲಂಚ ಪಡೆಯುತ್ತಿದ್ದ ಮಂಜುನಾಥ ಪೂಜಾರಿಯನ್ನು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular