ಉಳ್ಳಾಲ ; ರಾ.ಹೆ66 ರ ಕೋಟೆಕಾರುವಿನಲ್ಲಿ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಪಿಕಪ್ ವಾಹನ ಕಳವು ನಡೆಸಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಆತನಿಂದ ಕಳವು ನಡೆಸಿದ ಪಿಕಪ್ ವಾಹನವನ್ನ ವಶಪಡಿಸಿಕೊಳ್ಳಲಾಗಿದೆ.
ಕೇರಳ ಮೇಲ್ಪರಂಬ ಮಾಂಗಡ್ ನಿವಾಸಿ ಅಹಮ್ಮದ್ ರಮ್ಸಾನ್ ಯಾನೆ ರಮ್ಸಾನ್ (26) ಬಂಧಿತ ಆರೋಪಿ. ಜನವರಿ 3 ರಂದು ಕೋಟೆಕಾರು ಸೌತ್ ಇಂಡಿಯಾ ಮರದ ಡಿಪೋ ಬಳಿ ನಿಲ್ಲಿಸಲಾಗಿದ್ದ ಪಿಕಪ್ ಕಳವು ನಡೆದಿತ್ತು.ಈ ಕುರಿತು ವಾಹನ ಮಾಲೀಕ ಮಹಮ್ಮದ್ ಶರೀಫ್ ಎಂಬವರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು ಅಂತರಾಜ್ಯ ವಾಹನ ಕಳ್ಳರ ಜಾಡು ಹಿಡಿದಾಗ, ಆರೋಪಿ ರಮ್ಸಾನ್ ಪತ್ತೆಯಾಗಿದ್ದು, ವಿಚಾರಣೆ ನಡೆಸಿದಾಗ ಪಿಕಪ್ ವಾಹನ ಕಳವು ಬೆಳಕಿಗೆ ಬಂದಿದೆ. ಆರೋಪಿ ವಿರುದ್ಧ ಉಳ್ಳಾಲ, ಬೆಳ್ತಂಗಡಿ, ಮಡಿಕೇರಿ, ಕೇರಳದ ಹೊಸದುರ್ಗ, ಕಾಸರಗೋಡು, ಕುಂಬಳೆ, ಬೇಡಗಂ, ಬೇಕಲ ಪೊಲೀಸ್ ಠಾಣೆಗಳಲ್ಲಿ ವಾಹನ ಕಳವು ಪ್ರಕರಣಗಳು ಇವೆ.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಸಂದೀಪ್ ಜಿ.ಎಸ್, ಪಿಎಸ್ಐಗಳಾದ ಮಂಜೇಶ್ವರ ಚಂದಾವರ, ಕೃಷ್ಣ ಕೆ.ಹೆಚ್, ಸಂತೋಷ್,ಎಎಸ್ ಐಗಳಾದ ಶೇಖರ ಗಟ್ಟಿ, ರಿಜು, ಹೆಚ್.ಸಿಗಳಾದ ಪ್ರವೀಣ್ ಶೆಟ್ಟಿ, ಪಿಸಿಗಳಾದ ಅಶೋಕ್,ವಾಸುದೇವ ಚೌಹಾಣ್ ಭಾಗಿಯಾಗಿದ್ದರು.