Monday, March 17, 2025
Flats for sale
Homeಜಿಲ್ಲೆಅಸೈಗೋಳಿ ಕೆಎಸ್ಆರ್ ಪಿ 7 ನೇ ಬೆಟಾಲಿಯನ್ ಪೇದೆ ನೇಣು ಬಿಗಿದು ಆತ್ಮಹತ್ಯೆ.

ಅಸೈಗೋಳಿ ಕೆಎಸ್ಆರ್ ಪಿ 7 ನೇ ಬೆಟಾಲಿಯನ್ ಪೇದೆ ನೇಣು ಬಿಗಿದು ಆತ್ಮಹತ್ಯೆ.

ಉಳ್ಳಾಲ:(ಮಂಗಳೂರು)ಫೆ.19
ಅಸೈಗೋಳಿ ಕೆಎಸ್ಆರ್ ಪಿಯ ಏಳನೇ ಬೆಟಾಲಿಯನ್ ನ ನೂತನ ಬ್ಯಾಚ್ ನ ಪೊಲೀಸ್ ಪೇದೆ ಬಾಡಿಗೆ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ನಡೆಸಿಕೊಂಡಿರುವ ಘಟನೆ ಅಸೈಗೋಳಿ ಸೈಟ್ ನಲ್ಲಿ ಇಂದು ಸಂಜೆ ಬೆಳಕಿಗೆ ಬಂದಿದೆ.
ಬೆಳಗಾಂ ನಿವಾಸಿ ವಿಮಲನಾಥ ಜೈನ್ (28) ಆತ್ಮಹತ್ಯೆ ಮಾಡಿಕೊಂಡವರು. ತಿಂಗಳ ಹಿಂದಷ್ಟೇ ತಾಯಿ ತೀರಿಕೊಂಡ ನಂತರ ದು:ಖದಲ್ಲಿದ್ದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ನೂತನ ಬ್ಯಾಚ್ ನವರಾಗಿದ್ದ ವಿಮಲನಾಥ್ ಇಂದು ಕರ್ತವ್ಯಕ್ಕೆ ಹಾಜರಾಗದೇ ಬಾಡಿಗೆ ರೂಮಿನಲ್ಲಿ ಕೃತ್ಯ ಎಸಗಿದ್ದಾರೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular