ಶಿವಮೊಗ್ಗ : ಜಿಲ್ಲೆಯ ಹೊಸನಗರ ತಾಲೂಕಿನ ಗೋರಗೋಡು ಗ್ರಾಮದಲ್ಲಿ 9 ವರ್ಷದ ಬಾಲಕನ ಸಮಯಪ್ರಜ್ಞೆ ಮತ್ತು ಧೈರ್ಯದಿಂದ ತಂದೆಯ ಜೀವ ಉಳಿದ ಘಟನೆ ನಡೆದಿದೆ.
ಚಂದ್ರು ಅವರು ಹೊಳೆಯ ಬಳಿ ತೆರಳಿದ್ದ ವೇಳೆ ಆಕಸ್ಮಿಕವಾಗಿ ನೀರಿಗೆ ಬಿದ್ದು ತೇಲಿ ಹೋಗಿದ್ದಾರೆ. ಈ ದೃಶ್ಯ ಕಂಡ ಅವರ ಪುತ್ರ, 4ನೇ ತರಗತಿ ವಿದ್ಯಾರ್ಥಿ ನಂದನ್ ಧೃತಿಗೆಡದೆ ತಕ್ಷಣ ಸ್ಥಳೀಯರ ಬಳಿ ಓಡಿ ಹೋಗಿ ಮಾಹಿತಿ ನೀಡಿದ್ದಾನೆ. ನೀರಿನಲ್ಲಿ ತೇಲುತ್ತಿದ್ದ ತಂದೆಯ ಜರ್ಕಿನ್ನ್ನು ಗುರುತಿಸಿ ಸ್ಥಳೀಯರಿಗೆ ಸ್ಥಳವನ್ನು ತೋರಿಸಿದ ನಂದನ್ನ ಸಹಾಯದಿಂದ ಗ್ರಾಮಸ್ಥರು ಚಂದ್ರು ಅವರನ್ನು ಸುರಕ್ಷಿತವಾಗಿ ನೀರಿನಿಂದ ಹೊರತೆಗೆದು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ.
ಬಾಲಕನ ಸಮಯಪ್ರಜ್ಞೆ, ಧೈರ್ಯ ಮತ್ತು ಮಾನವೀಯತೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಾಹಸಿ ನಂದನ್ಗೆ ರಾಜ್ಯ ಸರ್ಕಾರ ಸೂಕ್ತ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದ್ದಾರೆ.


